March 7, 2026
Saturday, March 7, 2026
spot_img

ಸವಿತಾ ಸಮಾಜದ ಸಬಲೀಕರಣಕ್ಕೆ ಬಜೆಟ್ ಬೂಸ್ಟ್: ಸಲೂನ್ ಉದ್ಯಮಕ್ಕೆ ಸಿಗಲಿದೆ 10 ಲಕ್ಷ ಸಾಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸವಿತಾ ಸಮಾಜದ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಸ್ವಯಂ ಉದ್ಯೋಗವನ್ನು ಉತ್ತೇಜಿಸಲು ಸವಿತಾ ಸಮಾಜದ ಫಲಾನುಭವಿಗಳು ಹೊಸದಾಗಿ ಸಲೂನ್ ತೆರೆಯಲು ಅಥವಾ ಇರುವ ಉದ್ಯಮವನ್ನು ಆಧುನೀಕರಣಗೊಳಿಸಲು ಗರಿಷ್ಠ 10 ಲಕ್ಷದವರೆಗೆ ಆರ್ಥಿಕ ಸಹಾಯಧನವನ್ನು ನೀಡಲು ನಿರ್ಧರಿಸಲಾಗಿದೆ.

ಈ ಸಾಲದ ಮೊತ್ತಕ್ಕೆ ಕೇವಲ ಶೇ. 4 ರಷ್ಟು ಅತ್ಯಲ್ಪ ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ. ಅರ್ಹ ಫಲಾನುಭವಿಗಳು ತಮ್ಮ ಸಲೂನ್ ವ್ಯವಹಾರವನ್ನು ಸ್ಥಾಪಿಸಲು ₹10 ಲಕ್ಷದವರೆಗೆ ಹಣಕಾಸಿನ ನೆರವು ಪಡೆಯಬಹುದು.

ಸಮಾಜದ ಯುವಕರು ಮತ್ತು ವೃತ್ತಿಪರರು ಆಧುನಿಕ ತಂತ್ರಜ್ಞಾನದ ಸಲೂನ್‌ಗಳನ್ನು ಪ್ರಾರಂಭಿಸಿ, ಆರ್ಥಿಕವಾಗಿ ಸ್ವಾವಲಂಬಿಗಳಾಗುವಂತೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಸಮಾಜದ ಸಾಂಪ್ರದಾಯಿಕ ವೃತ್ತಿಗೆ ಆಧುನಿಕ ಸ್ಪರ್ಶ ನೀಡಲು ಮತ್ತು ಮಧ್ಯವರ್ತಿಗಳ ಕಾಟವಿಲ್ಲದೆ ನೇರವಾಗಿ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಯೋಜನೆಯಿಂದ ರಾಜ್ಯದ ಸಾವಿರಾರು ಸವಿತಾ ಸಮಾಜದ ಕುಟುಂಬಗಳಿಗೆ ಅನುಕೂಲವಾಗುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !