September 17, 2026
Thursday, September 17, 2026
spot_img

ಸಿಕ್ತು ಸಿಕ್ತು ಟಿಕೆಟ್: ನಾಳೆ ಐಪಿಎಲ್ ಮ್ಯಾಚ್ ವೀಕ್ಷಣೆಗೆ ಜೊತೆಯಾಗಲಿದ್ದಾರೆ ಶಾಸಕರು!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಾಸಕರು ಖುಷ್ ಆಗಿದ್ದಾರೆ!

ನಾಳೆಯಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಐಪಿಎಲ್ ಮ್ಯಾಚ್‌ಗೆ ಪ್ರತೀ ಶಾಸಕರಿಗೆ ತಲಾ ಎರಡು ಟಿಕೆಟ್‌ಗಳನ್ನು ನೀಡಲು ಒಪ್ಪಿಗೆ ಸಿಕ್ಕಿದೆ.

ಐಪಿಎಲ್ ವೀಕ್ಷಣೆಗೆ ರಾಜ್ಯದಲ್ಲಿ ಶಾಸಕರಿಂದ ಟಿಕೆಟ್ ಬೇಡಿಕೆಯೂ ಹೆಚ್ಚಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಜೊತೆ ಮಾತುಕತೆ ನಡೆಸಿದ್ದು, ಅವರ ಸೂಚನೆ ಬೆನ್ನಲ್ಲೇ ಪ್ರತಿ ಶಾಸಕರಿಗೆ ಎರಡು ಟಿಕೆಟ್ ನೀಡಲು ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ವೆಂಕೆಟೇಶ್ ಪ್ರಸಾದ್ ಒಪ್ಪಿಗೆ ನೀಡಿದ್ದಾರೆ.


ಪ್ರಸ್ತುತ ಟಿಕೆಟ್‌ಗಳಿಗೆ ತೀವ್ರ ಬೇಡಿಕೆ ಇರುವುದರಿಂದ ಸದ್ಯಕ್ಕೆ ಎರಡು ಟಿಕೆಟ್ ಮಾತ್ರ ನೀಡಲು ಸಾಧ್ಯ ಎಂದು ಸರ್ಕಾರಕ್ಕೆ ಕೆಎಸ್‌ಸಿಎ ತಿಳಿಸಿದೆ. ಅಸಮಾಧಾನಗೊಂಡಿದ್ದ ಶಾಸಕರು ಈಗ ಕೊಂಚ ಸಮಾಧಾನಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !