ತುಂಬಾ ದಿನಗಳಿಂದ ಟ್ರಿಪ್ ಹೋಗ್ಬೇಕು ಅನ್ನಿಸ್ತಾ ಇದೆಯಾ? ಜೀವನದ ಬ್ಯುಸಿಯ ನಡುವೇ ಒಮ್ಮೆ ಎಲ್ಲಾದ್ರೂ ಹೋಗಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿ ಬಂದ್ರೆ ತಕ್ಷಣ ಎನರ್ಜಿ ಬರುತ್ತೆ ಅಲ್ಲವಾ! ಆದ್ರೆ “ಬಜೆಟ್ ಕಥೆ ಏನು”, “ಹೆಚ್ಚು ಖರ್ಚಾಗಲ್ಲಾ?” ಅಂತ ಯೋಚನೆ ಬರುತ್ತೆ. ಅದಕ್ಕೆ ಪರಿಹಾರವೇನೆಂದರೆ – ಬೆಂಗಳೂರಿನಿಂದ ಬಜೆಟ್ ಫ್ರೆಂಡ್ಲಿ ಫ್ಲೈಟ್ ಟ್ರಿಪ್‌ಗಳು!
ಗೋವಾ (Goa)
ಗೋವಾ ಎಂದರೆ ಕಡಲ ತೀರ, ಪಾರ್ಟಿಗಳು ಮತ್ತು ವಿಶ್ರಾಂತಿಯ ಸ್ಥಳ. ಬೆಂಗಳೂರಿನಿಂದ ತುಂಬಾ ವಿಮಾನಗಳು ಲಭ್ಯವಿದ್ದು, ಕೆಲವೊಂದು ವಿಮಾನ ಟಿಕೆಟ್‌ಗಳು 4,000 5,000 ರಿಂದ ಆರಂಭವಾಗುತ್ತವೆ. ಬಜೆಟ್ ಹೋಟೆಲ್, ಹೋಸ್ಟೆಲ್‌ಗಳು ಸಹ ಹೆಚ್ಚು ದೊರೆಯುತ್ತವೆ.
ಹೈದರಾಬಾದ್ (Hyderabad)
ಇತಿಹಾಸ ಮತ್ತು ತಿಂಡಿ ಪ್ರಿಯರ ಗಮ್ಯಸ್ಥಾನ. ಚಾರ್ಮಿನಾರ್, ಗೊಲ್ಕೊಂಡಾ ಕೋಟೆ, ರಾಮೋಜಿ ಫಿಲ್ಮ್ ಸಿಟಿ ಹತ್ತಿರಕ್ಕೆ ತಲುಪಲು ಇದು ಸೂಕ್ತ. ಫ್ಲೈಟ್ ಟಿಕೆಟ್ 5,000 ಒಳಗೆ ಇರುತ್ತೆ.
ಪುಣೆ (Pune)
ಹೆಚ್ಚು ಶಾಂತ ಪರಿಸರ ಮತ್ತು ಪ್ರಕೃತಿ ಪ್ರೇಮಿಗಳಿಗೆ ಸೂಕ್ತ ಸ್ಥಳ. ಲೋನಾವಾಲ ಅಥವಾ ಮಹಾಬಲೇಶ್ವರಕ್ಕೆ ಸಹ ಹೋಗಬಹುದು. ಟಿಕೆಟ್ ದರ 1500-2500 ನಡುವೆ ಸಿಗಬಹುದು.
ಕೊಚ್ಚಿನ್ (Kochi)
ಕೇರಳದ ಸಮುದ್ರ ತೀರ, ಹೌಸ್‌ಬೋಟ್, ಬ್ಯಾಕ್‌ವಾರ್ಟರ್ ಅನುಭವಿಸಬೇಕಾದರೆ ಕೊಚ್ಚಿನ್ ಗೆ ವಿಮಾನ ಬಜೆಟ್ ಟ್ರಿಪ್ ಮಾಡಬಹುದು. ಟಿಕೆಟ್ ದರ 1000-2000 ಒಳಗೆ ದೊರೆಯಬಹುದು.
ಮುಂಬೈ (Mumbai)
ಅದ್ಭುತ ನಗರದ ಅನುಭವಕ್ಕಾಗಿ ಮುಂಬೈ ಒಳ್ಳೆಯ ಆಯ್ಕೆ. ಕಡಿಮೆ ಬಜೆಟ್‌ನಲ್ಲಿ ವಿಶ್ರಾಂತಿಯ ಜೊತೆಗೆ ನಗರ ಜೀವನ ನೋಡಿ ಬರಬಹುದು. ಟಿಕೆಟ್ ದರ 1500-2500 ಒಳಗೆ ಸಿಗುತ್ತೆ.
ಟಿಪ್ಸ್:
ವೀಕ್‌ಡೇ ಪ್ರಯಾಣ ಮಾಡಿ: ಶನಿವಾರ-ಭಾನುವಾರ ಬದಲಿಗೆ ಮಂಗಳವಾರ ಅಥವಾ ಬುಧವಾರ ಪ್ರಯಾಣ ಮಾಡಿದರೆ ಟಿಕೆಟ್ ಕಡಿಮೆ ಬೆಲೆಯಲ್ಲಿ ಸಿಗಬಹುದು.
ಲೋ ಕಾಸ್ಟ್ ಏರ್‌ಲೈನ್ (Go First, Akasa, SpiceJet, IndiGo) ಆಯ್ಕೆಮಾಡಿ.
ಇನ್‌ಕೋಗ್ನಿಟೋ ಮೋಡ್ ಅಥವಾ “ಪ್ರೈವೇಟ್ ಬ್ರೌಸಿಂಗ್” ಮೂಲಕ ಟಿಕೆಟ್ ಹುಡುಕಿ.
ಎಕ್ಸ್‌ಪಿರಿಯನ್ಸ್‌ಗೆ ಗಮನ ನೀಡಿ, ಸ್ಥಳೀಯ ಆಹಾರ ಮತ್ತು ಸಂಸ್ಕೃತಿಯ ಆಸ್ವಾದನೆ ಮಾಡಿ.