SHOCKING| ಈ ಇರುವೆ ತುಂಬಾ ಡೇಂಜರಸ್‌, ಕಚ್ಚಿದರೆ ಕ್ಷಣಾರ್ಧದಲ್ಲಿ ಪ್ರಾಣ ಹೋಗುತ್ತಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇರುವೆ ಕಚ್ಚಿದರೆ ಊತ, ತುರಿಕೆ, ಉರಿ ಬರುವುದು ಸಾಮಾನ್ಯ. ಆದರೆ ಈ ಇರುವೆ ಕಚ್ಚದರೆ ಪ್ರಾಣವೇ ಹೋಗುತ್ತಂತೆ. ಆಶ್ಚರ್ಯ ಅನಿಸಿದರೂ ನೀವು ಕೇಳುತ್ತಿರುವುದು ಅಕ್ಷರಶಃ ಸತ್ಯ. ಅಂತಹ ಕೆಲವು ಇರುವೆಗಳೂ ಇವೆ. ಈಗ ಆ ಇರುವೆಗಳ ಬಗ್ಗೆ ತಿಳಿಯೋಣ.

ವಿಶ್ವದ ಅತ್ಯಂತ ಅಪಾಯಕಾರಿ ಇರುವೆಯ ವೈಜ್ಞಾನಿಕ ಹೆಸರು ‘ಬುಲ್ಡಾಗ್ ಇರುವೆ’. ಇದು ಆಸ್ಟ್ರೇಲಿಯಾದ ಕರಾವಳಿ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. 1936ರಿಂದ ಈ ಇರುವೆ ಕಡಿತದಿಂದ ಅನೇಕ ಜನರು ಸಾವನ್ನಪ್ಪಿದ್ದಾರೆ. ಈ ಇರುವೆ ಸುಮಾರು 20 ಮಿ.ಮೀ.ಉದ್ದ ಇರುತ್ತದೆ. ಇದು ಕಚ್ಚಿದ 15 ನಿಮಿಷಗಳಲ್ಲಿ ಅದರ ವಿಷವು ಮನುಷ್ಯನನ್ನು ಕೊಲ್ಲುವಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಈ ಇರುವೆಗಳ ದೇಹದ ಉದ್ದ 20 ಮಿಮೀ ಮತ್ತು ತೂಕ 0.015 ಗ್ರಾಂ. ಇದರ ಜೀವಿತಾವಧಿ ಕೇವಲ 21 ದಿನಗಳು. ಈ ಅಪಾಯಕಾರಿ ಇರುವೆಗಳನ್ನು 1793 ರಲ್ಲಿ ಕಂಡುಹಿಡಿಯಲಾಯಿತು. ಅವುಗಳ ಗೂಡುಗಳು ಹೆಚ್ಚಾಗಿ ಮಣ್ಣಿನಲ್ಲಿ ಕಂಡುಬರುತ್ತವೆ, ಕೆಲವೊಮ್ಮೆ ಕೊಳೆತ ಮರ ಮತ್ತು ಬಂಡೆಗಳ ಅಡಿಯಲ್ಲಿಯೂ ಕಂಡುಬರುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!