ಹೊಸದಿಗಂತ ಡಿಜಿಟಲ್ ಡೆಸ್ಕ್:
ಎನರ್ಜಿಟಿಕ್ ಸ್ಟಾರ್ ರಾಮ್ ಪೋತಿನೇನಿ ಇಸ್ಮಾರ್ಟ್ ಶಂಕರ್ ಚಿತ್ರದ ಮೂಲಕ ದೊಡ್ಡ ಕಂಬ್ಯಾಕ್ ಪಡೆದರು. ಆ ಸಿನಿಮಾ ಬಳಿಕ ತಮಿಳು ನಿರ್ದೇಶಕ ಎನ್. ಲಿಂಗುಸಾಮಿ ನಿರ್ದೇಶನದಲ್ಲಿ ತೆಲುಗು ಮತ್ತು ತಮಿಳಿನಲ್ಲಿ “ದಿ ವಾರಿಯರ್” ಎಂಬ ಸಿನಿಮಾ ಮಾಡುತ್ತಿದ್ದಾರೆ. ರಾಮ್ ಅವರ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ದೊಡ್ಡ ಆಕ್ಷನ್ ಎಂಟರ್‌ಟೈನರ್ ಆಗಿ, ‘ದಿ ವಾರಿಯರ್’ ಚಿತ್ರದಲ್ಲಿ ಪೊಲೀಸ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಕೃತಿ ಶೆಟ್ಟಿ ನಾಯಕಿಯಾಗಿ ಹಾಗೂ ಆದಿ ಪಿನಿಶೆಟ್ಟಿ ಖಳನಟನಾಗಿ ನಟಿಸಿದ್ದಾರೆ.
ಇದೀಗ ಈ ಚಿತ್ರದ ಬುಲೆಟ್ ಸಾಂಗ್ ಬಿಡುಗಡೆಯಾಗಿದೆ. ತಮಿಳಿನ ಸ್ಟಾರ್ ಹೀರೋ ಶಿಂಬು ಸಿನಿಮಾದಲ್ಲಿ ಬುಲೆಟ್ ಹಾಡನ್ನು ಹಾಡಿದ್ದಾರೆ. ಸಂಪೂರ್ಣ ಲಿರಿಕಲ್ ಹಾಡನ್ನು ಬಿಡುಗಡೆ ಮಾಡಲಾಗಿದ್ದು, ತಮಿಳು ಮತ್ತು ತೆಲುಗಿನಲ್ಲಿ ಶಿಂಬು ಹಾಡಿರುವ ಈ ಹಾಡಿಗೆ ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಉಪ್ಪೆನ ಮೂಲಕ ತೆಲುಗು ಪ್ರೇಕ್ಷಕರಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಕನ್ನಡದ ಬೆಡಗಿ ಕೃತಿ ಶೆಟ್ಟಿ, ಈ ಹಾಡಿಗೆ ಮಸ್ತ್ ಸ್ಟೆಪ್ಸ್ ಹಾಕಿದ್ದಾರೆ. ಈಗಾಗಲೇ ಬಂಗಾರ‍್ರಾಜು ಸಿನಿಮಾದಲ್ಲಿ ಒಂದು ಹಾಡಿಗೆ ಮಾಸ್ ಬೀಟ್ ಮಾಡಿರುವ ಕೃತಿ, ಈಗ ಮತ್ತೊಮ್ಮೆ ಈ ಬುಲೆಟ್ ಸಾಂಗ್‌ನಲ್ಲಿ ಹುಚ್ಚೆದ್ದು ಕುಣಿದಿದ್ದಾರೆ.
ಲಿರಿಕಲ್ ಸಾಂಗ್ ನಲ್ಲಿ ಇಷ್ಟು ಸ್ಟೆಪ್ಸ್ ಇದ್ದರೆ ಫುಲ್ ವಿಡಿಯೋ ಸಾಂಗ್ ನಲ್ಲಿ ಇನ್ನೆಷ್ಟು ಸ್ಟೆಪ್ಸ್ ಇದೆ ಅನ್ನೋದು ಕೃತಿಯ ಅಭಿಮಾನಿಗಳಿಗೆ ಖುಷಿ ತಂದಿದೆ. ರಾಮ್ ಎನರ್ಜಿಗೆ ಹೊಂದಿಕೆಯಾಗುವಂತೆ ನೃತ್ಯ ಸಂಯೋಜನೆ ಮಾಡಲಾಗಿದೆ. ಈ ಹಾಡಿಗೆ ಶೇಖರ್ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ಈ ಹಾಡು ಯೂಟ್ಯೂಬ್ ನಲ್ಲಿ ಬುಲೆಟ್ ಗಾಡಿ ಎಂದು ಟ್ರೆಂಡಿಂಗ್ ಆಗಿದೆ.