ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರವು ಇಂದು ಸಂಪುಟ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, ಈ ಮೂಲಕ ರೈತರಿಗೆ ಬಂಪರ್ ಉಡುಗೊರೆ ನೀಡಿದೆ.
ಕೇಂದ್ರ ಸರ್ಕಾರವು 2022-23ರಿಂದ 2024-25ನೇ ಸಾಲಿನವರೆಗೆ ಅಂದರೆ, ಮೂರು ವರ್ಷಗಳ ಅವಧಿಗೆ ಯೂರಿಯಾ ರಸಗೊಬ್ಬರಕ್ಕೆ 3.68 ಲಕ್ಷ ಕೋಟಿ ರೂಪಾಯಿ ಸಬ್ಸಿಡಿ ಘೋಷಿಸಿದೆ. ಇದರಿಂದಲೂ ಕೋಟ್ಯಂತರ ರೈತರು ಕಡಿಮೆ ಬೆಲೆಗೆ ರಸಗೊಬ್ಬರ ಖರೀದಿಸಲು ಸಾಧ್ಯವಾಗಲಿದೆ.
ಸದ್ಯ, 45 ಕೆ.ಜಿಯ ಯೂರಿಯಾ ಬ್ಯಾಗ್‌ಗೆ 242 ರೂಪಾಯಿ ಸಬ್ಸಿಡಿ ಇದೆ. ಇದೇ ಸಬ್ಸಿಡಿಯನ್ನು ಮುಂದುವರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಅದೇ ರೀತಿ ಪರ್ಯಾಯ ರಸಗೊಬ್ಬರಗಳನ್ನು ಉತ್ತೇಜಿಸಲು ರಾಜ್ಯಗಳನ್ನ ಉತ್ತೇಜಿಸಲು ಪಿಎಂ-ಪ್ರಣಮ್ ಎಂಬ ಹೊಸ ಯೋಜನೆಗೆ ಕ್ಯಾಬಿನೆಟ್ ಬುಧವಾರ ಅನುಮೋದನೆ ನೀಡಿದೆ . ಈ ಯೋಜನೆಗೆ ಸರ್ಕಾರ 3 ಲಕ್ಷ 68 ಸಾವಿರ ಕೋಟಿ ರೂಪಾಯಿ ಮೀಸಲಿರಿಸಿದೆ.ಇದರ ಅಡಿಯಲ್ಲಿ, ರಾಜ್ಯಗಳಿಗೆ ಆರ್ಥಿಕ ನೆರವು ನೀಡಲಾಗುವುದು ಮತ್ತು ರಾಜ್ಯಗಳು ರಸಗೊಬ್ಬರ ವ್ಯವಸ್ಥೆಯನ್ನು ಬಲಪಡಿಸಲು ಸಾಧ್ಯವಾಗುತ್ತದೆ.
ಹಾಗೆಯೆ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದೆ. 2023-24ನೇ ಸಾಲಿನಲ್ಲಿ (ಅಕ್ಟೋಬರ್-ಸೆಪ್ಟೆಂಬರ್) ಒಂದು ಕ್ವಿಂಟಾಲ್ ಕಬ್ಬಿಗೆ ಕೇಂದ್ರ ಸರ್ಕಾರವು 315 ರೂಪಾಯಿ ನ್ಯಾಯಯುತ ಹಾಗೂ ಪ್ರೋತ್ಸಾಹ ಧನ (Fair and Remunerative Price-FRP) ನೀಡುವುದಾಗಿ ಘೋಷಿಸಿದೆ.