ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಬಜೆಟ್‌ನಲ್ಲಿ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ಗೆ 5,958 ಕೋಟಿ ರೂ.ಗಳ ಅನುದಾನವನ್ನು ನಿಗದಿಪಡಿಸಿದೆ. ಇದು ಕಳೆದ ವರ್ಷ ಹಂಚಿಕೆ ಮಾಡಲಾಗಿದ್ದ 4,500 ಕೋಟಿ ರೂ.ಗಳಿಂದ ಶೇ.32 ರಷ್ಟು ಹೆಚ್ಚಳವಾಗಿದೆ.
2019 ರಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರದ ಲಡಾಖ್ ಕೇಂದ್ರಾಡಳಿತ ಪ್ರದೇಶ ತನ್ನ ಸಚಿವಾಲಯ ಸಂಬಂಧಿತ ವೆಚ್ಚಗಳು ಮತ್ತು ಇತರ ಇಲಾಖೆಗಳು ಮತ್ತು ಕಚೇರಿಗಳ ಸ್ಥಾಪನೆ ವೆಚ್ಚಕ್ಕಾಗಿ 2,035.49 ಕೋಟಿ ರೂಪಾಯಿ ಹಣ ಸ್ವೀಕರಿಸಿದೆ.
ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಲ್ಲಿ, ಕೃಷಿ ಮತ್ತು ಸಂಬಂಧಿತ ಯೋಜನೆಗಳು, ನೀರು ಸರಬರಾಜು ಮತ್ತು ನೈರ್ಮಲ್ಯ, ಗ್ರಾಮೀಣಾಭಿವೃದ್ಧಿ, ವಿದ್ಯುತ್, ಅರಣ್ಯ ಮತ್ತು ವನ್ಯಜೀವಿ, ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ, ಶಿಕ್ಷಣ ಸೇರಿದಂತೆ ಇತರ ಕೇಂದ್ರ ವಲಯದ ವೆಚ್ಚಗಳಿಗಾಗಿ ಲಡಾಖ್‌ಗೆ 3,922.51 ಕೋಟಿ ರೂ. ಅನುದಾನ ಘೋಷಿಸಿದ್ದಾರೆ.