ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾರ ಜೀವನದಲ್ಲಾದ್ರೂ ಅದೃಷ್ಟ ಹೇಗಾದ್ರೂ ಒಲಿದು ಬರುತ್ತದೆ, ನಂಬಿಕೆ ಹಾಗೂ ತಾಳ್ಮೆ ಇರಬೇಕಷ್ಟೆ.
ಬೆಳಗ್ಗೆಯೇ ಎದ್ದು ರಸ್ತೆಗಳನ್ನು ಗುಡಿಸುವ ಶ್ರಮಜೀವಿಗಳಾದ ಕೇರಳದ ಪೌರಕಾರ್ಮಿಕರಿಗೆ ಜಾಕ್‌ಪಾಟ್ ಹೊಡೆದಿದೆ. 250 ರೂಪಾಯಿಯೂ ಇಲ್ಲದೆ ಸಾಲ ಪಡೆದು 11 ಮಹಿಳೆಯರು ಲಾಟರಿ ಖರೀದಿಸಿದ್ದರು. ಕೇರಳ ಲಾಟರಿ ಇಲಾಖೆ ನಡೆಸುವ ಡ್ರಾನಲ್ಲಿ ಅವರಿಗೆ 10 ಕೋಟಿ ರೂಪಾಯಿ ಬಹುಮಾನ ಸಿಕ್ಕಿದೆ.
ನಾವೆಲ್ಲರೂ ದುಡ್ಡು ಹಾಕಿ ಸೇರಿ ಲಾಟರಿ ಖರೀದಿ ಮಾಡಿದ್ದೆವು, ಒಂದಲ್ಲಾ ಒಂದು ದಿನ ಅದೃಷ್ಟ ಒಲಿಯಲಿ ಎನ್ನುವುದು ನಮ್ಮ ಆಸೆಯಾಗಿತ್ತು. ಆದರೆ ಈ ಬಾರಿ ನಮಗೆ ಲಾಟರಿ ಸಿಗುತ್ತದೆ ಎನ್ನುವ ನಂಬಿಕೆ ಇರಲಿಲ್ಲ. ಇದು ಅದೃಷ್ಟ ಹಾಗೂ ಆಶ್ಚರ್ಯ ಎಂದು ಮಹಿಳೆಯರು ಹೇಳಿದ್ದಾರೆ.