ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಿಸಾನ್ ಕ್ರೆಡಿಟ್ ಕಾರ್ಡ್ ಮೇಲಿನ 3 ಲಕ್ಷ ಸಾಲದ ಮೇಲಿನ ಬಡ್ಡಿ ರಿಯಾಯಿತಿಯನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ಅಲ್ಪಾವಧಿ ಸಾಲದ ಮೇಲೆ ವಿಧಿಸಲಾಗುತ್ತಿದ್ದ 7%ನಷ್ಟು ಬಡ್ಡಿ ಮೇಲೆ 1.5%ನಷ್ಟು ಬಡ್ಡಿ ರಿಯಾಯಿತಿ ನೀಡುತ್ತಿದೆ.
ಅಲ್ಲದೇ ಸಮಯಕ್ಕೆ ತಕ್ಕಂತೆ ಸಾಲ ಪಾವತಿಸುತ್ತಿರುವ ರೈತರಿಗೆ 3% ಬಡ್ಡಿ ವಿನಾಯಿತಿಯೂ ಸಿಗಲಿದೆ. ಇದರಿಂದ ಒಟ್ಟಾರೆ ಬಡ್ಡಿದರ 4%ಗೆ ಇಳಿದಂತಾಗಿದೆ.
2 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ನೀಡಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದು ರೈತರಿಗೆ ಸಿಹಿಸುದ್ದಿ ಕೊಟ್ಟಿದೆ.