ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೆಟ್ರೋ ನಿಲ್ದಾಣ ತಲುಪಲು ಸೈಕಲ್ ಬಳಸುವವರಿಗೆ ಬಿಎಂಆರ್‌ಸಿಎಲ್ ಭರ್ಜರಿ ಕೊಡುಗೆ ನೀಡಿದೆ. ನಗರದ 9 ಪ್ರಮುಖ ನಿಲ್ದಾಣಗಳಲ್ಲಿ ಸೈಕಲ್ ಪಾರ್ಕಿಂಗ್ ಶುಲ್ಕವನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ. ಪ್ರಸ್ತುತ ಗಂಟೆಗೆ 1 ರೂ. ಹಾಗೂ ದಿನಕ್ಕೆ ಗರಿಷ್ಠ 10 ರೂ. ಇರುವ ಶುಲ್ಕವನ್ನು ಸೈಕ್ಲಿಂಗ್ ಉತ್ತೇಜಿಸುವ ಸಲುವಾಗಿ ಕೈಬಿಡಲಾಗಿದೆ.
ಸದ್ಯಕ್ಕೆ ಈ ಕೆಳಗಿನ ಒಂಬತ್ತು ನಿಲ್ದಾಣಗಳಲ್ಲಿ ಮಾತ್ರ ಉಚಿತ ಪಾರ್ಕಿಂಗ್ ಲಭ್ಯವಿರಲಿದೆ:
ಪರ್ಪಲ್ ಲೈನ್: ಮೈಸೂರು ರಸ್ತೆ, ಬೈಯಪ್ಪನಹಳ್ಳಿ.
ಗ್ರೀನ್ ಲೈನ್: ಮಡವಾರ, ಪೀಣ್ಯ ಇಂಡಸ್ಟ್ರಿ, ಜೆಪಿ ನಗರ.
ಯೆಲ್ಲೋ ಲೈನ್: ಬಿಟಿಎಂ ಲೇಔಟ್, ಎಲೆಕ್ಟ್ರಾನಿಕ್ಸ್ ಸಿಟಿ, ರಾಗಿಗುಡ್ಡ, ಜಯದೇವ ಆಸ್ಪತ್ರೆ.
ಮೆಟ್ರೋ ಪಾರ್ಕಿಂಗ್ ನಿರ್ವಹಣೆಗಾಗಿ ಬಿಎಂಆರ್‌ಸಿಎಲ್ ಈಗಾಗಲೇ ಹೊಸ ಟೆಂಡರ್ ಆಹ್ವಾನಿಸಿದ್ದು, ಫೆಬ್ರವರಿ 9ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಅಧಿಕೃತವಾಗಿ ಈ ಬದಲಾವಣೆ ಜಾರಿಗೆ ಬರಲಿದೆ. ಉಳಿದ ನಿಲ್ದಾಣಗಳಲ್ಲಿ ಹಳೆಯ ಶುಲ್ಕ ವ್ಯವಸ್ಥೆಯೇ ಮುಂದುವರಿಯಲಿದೆ.



