ಹೊಸದಿಗಂತ ಡಿಜಿಟಲ್ ಡೆಸ್ಕ್;
ಭಾರತದಲ್ಲಿ ಇತರ ಕ್ರೀಡೆಗಳಿಗಿಂತ ಕ್ರಿಕೆಟ್ ಗೆ ಹೆಚ್ಚಿನ ಸೌಲಭ್ಯಗಳು ಮತ್ತು ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು 2012 ರ ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿರುವ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ತಕರಾರರು ತೆಗೆದಿದ್ದಾರೆ.
ಇತ್ತೀಚೆಗೆ, ಕೆಕೆಆರ್ನ ಯುವ ಬ್ಯಾಟರ್ ಆಂಗ್ರಿಶ್ ರಘುವಂಶಿ ಅವರು ಸೈನಾ ನೆಹ್ವಾಲ್ ಅವರನ್ನು ಅಣಕಿಸುವ ಟ್ವೀಟ್ ಮಾಡಿದ್ದರು. ಅದರಿಂದ ಬೇಸರಗೊಂಡಿರುವ ನೆಹ್ವಾಲ್ ಪರೋಕ್ಷವಾಗಿ ಕ್ರಿಕೆಟ್ ಕ್ಷೇತ್ರಕ್ಕೆ ಟಾಂಗ್ ಕೊಟ್ಟಿದ್ದಾರೆ. ಕ್ರಿಕೆಟರ್ಗಳಿಂತ ಉಳಿದ ಕ್ರೀಡಾಕೂಟಗಳ ಆಟಗಾರರೇ ಹೆಚ್ಚು ಶ್ರಮ ವಹಿಸುತ್ತಾರೆ. ನನ್ನ ಸ್ಮ್ಯಾಶ್ ತಡೆದುಕೊಳ್ಳುವುದಕ್ಕೂ ಜಸ್ಪ್ರಿತ್ ಬುಮ್ರಾಗೆ ಸಾಧ್ಯವಿಲ್ಲ ಎಂಬುದಾಗಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಆ ಮಟ್ಟದಲ್ಲಿ ಬೆಳೆದಿದ್ದು ಹೇಗೆ? ಎಲ್ಲರೂ ಏಕೆ ರೋಹಿತ್ ಶರ್ಮಾ ರೀತಿ ಆಗಲು ಬಯಸುತ್ತಾರೆ. ಆದರೆ ಕೆಲವರಿಗಷ್ಟೇ ಆ ರೀತಿ ಆಗಲು ಸಾಧ್ಯವಾಗುತ್ತದೆ. ಅದು ಕೌಶಲ್ಯ ಆಧಾರಿತ ಕ್ರೀಡೆ ಎಂದು ನಾನು ಭಾವಿಸುತ್ತೇನೆ. ನಾನ್ಯಾಕೆ ಬೌಲರ್ಗಳನ್ನು ಎದುರಿಸಬೇಕು ಎಂದು ಸೈನಾ ಪ್ರಶ್ನಿಸಿದ್ದಾರೆ. (ಅಂಗ್ಕ್ರಿಶ್ ಸೈನಾ ಅವರನ್ನು ಲೇವಡಿ ಮಾಡುವ ಭರದಲ್ಲಿ ಬುಮ್ರಾ ಅವರ ಬೌಲಿಂಗ್ ಎದುರಿಸಲಿ ಎಂದು ಸವಾಲೊಡ್ಡಿದ್ದರು) ನಾನು 8 ವರ್ಷಗಳಿಂದ ಆಡುತ್ತಿದ್ದರೆ, ಬಹುಶಃ ನಾನು ಜಸ್ಪ್ರೀತ್ ಬುಮ್ರಾಗೆ ಉತ್ತರಿಸುತ್ತಿದ್ದೆ ಎಂದು ಸೈನಾ ನೆಹ್ವಾಲ್ ಹೇಳಿದ್ದಾರೆ.
ಜಸ್ಪ್ರೀತ್ ಬುಮ್ರಾ ನನ್ನೊಂದಿಗೆ ಬ್ಯಾಡ್ಮಿಂಟನ್ ಆಡಿದರೆ ಬಹುಶಃ ಅವರು ನನ್ನ ಸ್ಮಾಶ್ ತೆಗೆದುಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಈ ವಿಷಯಗಳಿಗಾಗಿ ನಾವು ನಮ್ಮ ಸ್ವಂತ ದೇಶದಲ್ಲಿ ನಮ್ಮೊಂದಿಗೆ ಜಗಳವಾಡಬಾರದು. ಅದನ್ನೇ ನಾನು ಹೇಳಲು ಬಯಸುತ್ತೇನೆ. ಪ್ರತಿಯೊಂದು ಕ್ರೀಡೆಯೂ ಅದರ ಸ್ಥಾನದಲ್ಲಿ ಅತ್ಯುತ್ತಮವಾಗಿದೆ. ಆದರೆ ಇತರ ಕ್ರೀಡೆಗಳಿಗೂ ಮೌಲ್ಯ ನೀಡಿ ಎಂದು ನಾನು ಹೇಳಲು ಬಯಸುತ್ತೇನೆ. ಇಲ್ಲದಿದ್ದರೆ, ನಾವು ಕ್ರೀಡಾ ಸಂಸ್ಕೃತಿಯನ್ನು ಎಲ್ಲಿಂದ ಬೆಳೆಸುತ್ತೇವೆ. ಕ್ರಿಕೆಟ್, ಬಾಲಿವುಡ್ ಯಾವಾಗಲೂ ನಮ್ಮ ಉದ್ದೇಶವಾಗಿರುತ್ತದೆ ಎಂದು ಹೇಳಿದರು.
ಕ್ರಿಕೆಟ್ ಮತ್ತು ಇತರ ಭಾರತೀಯ ಕ್ರೀಡೆಗಳ ನಡುವಿನ ಅಸಮಾನತೆ ಕಡಿಮೆಯಾಗಿ ಕ್ರೀಡಾಪಟುಗಳಿಗೆ ಉತ್ತಮ ಸೌಲಭ್ಯಗಳನ್ನು ನೀಡಿದರೆ, ಅವರು ದೇಶಕ್ಕೆ ಹೆಚ್ಚಿನ ಪದಕ ತರಲು ಸಾಧ್ಯವಾಗುತ್ತದೆ ಎಂದು ಸೈನಾ ನೆಹ್ವಾಲ್ ಗಮನಸೆಳೆದರು.