ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾವಿರುದ್ಧ ಆತಿಥೇಯ ಐರ್ಲೆಂಡ್ ತಂಡವನ್ನು ಮೊದಲ ಟಿ20 ಪಂದ್ಯದಲ್ಲಿ 139/7 ರನ್‌ಗಳ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ.
ಭಾರತದ ಪರ ಬೌಲಿಂಗ್ ದಾಳಿ ಆರಂಭಿಸಿದ ಕ್ಯಾಪ್ಟನ್ ಜಸ್‌ಪ್ರೀತ್ ಬುಮ್ರಾ ಮೊದಲ ಓವರ್‌ನಲ್ಲೇ 2 ವಿಕೆಟ್ ಕಿತ್ತು, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಭರ್ಜರಿ ಕಮ್‌ಬ್ಯಾಕ್ ಮಾಡಿದರು.
ಐರ್ಲೆಂಡ್ ಪರ ಆರಂಭಿಕ ಆಘಾತದಿಂದ ಚೇತರಿಕೆ ತಂದ ಕರ್ಟಿಸ್ ಕ್ಯಾಂಫರ್ (39) ಮತ್ತು ಬ್ಯಾರಿ ಮೆಕಾರ್ತಿ (51*) ದಿಟ್ಟ ಆಟವಾಡಿ ತಂಡಕ್ಕೆ ಗೌರವದ ಮೊತ್ತ ತಂದರು. 20 ಓವರ್‌ಗಳಲ್ಲಿ ಐರ್ಲೆಂಡ್, 139/7 ರನ್ ಕಲೆಹಾಕಿತು.
ಭಾರತದ ಪರ ಬುಮ್ರಾ (24ಕ್ಕೆ 2), ಪ್ರಸಿಧ್ ಕೃಷ್ಣ (32ಕ್ಕೆ 2) ಮತ್ತು ರವಿ ಬಿಷ್ಣೋಯ್ (23ಕ್ಕೆ 3) ತಲಾ ಎರಡು ವಿಕೆಟ್ ಪಡೆದರೆ, ಅರ್ಷದೀಪ್ ಸಿಂಗ್ 1 ವಿಕೆಟ್ ಪಡೆದರೂ 35 ರನ್ ಕೊಟ್ಟರು.