ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸತ್ತಿನ ಚಳಿಗಾಲದ ಅಧಿವೇಶನ ಮುಂದುವರಿದಿದ್ದು, ಇಂದು ಕಾಂಗ್ರೆಸ್ ರಾಜ್ಯಸಭಾ ಸಂಸದರೊಬ್ಬರ ಸೀಟಿನಡಿ ಹಣ ಪತ್ತೆಯಾಗಿದ್ದು, ಸದನದಲ್ಲಿ ಗದ್ದಲ ಮನೆ ಮಾಡಿದೆ.
ರಾಜ್ಯಸಭಾ ಸಂಸದರ ಸೀಟಿನ ಸಂಖ್ಯೆ 222ರಲ್ಲಿ 500 ರೂಪಾಯಿ ನೋಟುಗಳ ಬಂಡಲ್ ಪತ್ತೆಯಾಗಿದೆ. ಮೂಲಗಳ ಪ್ರಕಾರ ಇದರಲ್ಲಿ 50 ಸಾವಿರ ರೂ. ಹಣವಿತ್ತು ಎನ್ನಲಾಗಿದೆ.
ತೆಲಂಗಾಣದಿಂದ ಕಾಂಗ್ರೆಸ್ ಸಂಸದರಾಗಿ ಆಯ್ಕೆಯಾಗಿರುವ ಅಭಿಷೇಕ್ ಮನು ಸಿಂಘ್ವಿ ಅವರ ಸೀಟಿನಲ್ಲಿ ಹಣವಿತ್ತು ಎನ್ನಲಾಗಿದೆ. ಸದನದಲ್ಲಿ ಸ್ಪೀಕರ್ ಧಂಖರ್ ಹೇಳಿಕೆ ವಿರುದ್ಧ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸಿದರು. ತನಿಖೆ ಬಾಕಿ ಇರುವವರೆಗೆ ಹೆಸರುಗಳನ್ನು ಬಹಿರಂಗಪಡಿಸಬಾರದು ಎಂದು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ.
ಅಭಿಷೇಕ್ ಮನು ಸಿಂಘ್ವಿ ಈ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಪ್ರತಿ ಬಾರಿ ರಾಜ್ಯಸಭೆಗೆ ಹೋದಾಗಲೆಲ್ಲ 500 ರೂಪಾಯಿ ನೋಟು ಹಿಡಿದು ಬರುತ್ತೇನೆ ಎಂದ ಅವರು, ಈ ಬಗ್ಗೆ ಕೇಳಿದ್ದು ಇದೇ ಮೊದಲು. ಮಧ್ಯಾಹ್ನ 12.57ಕ್ಕೆ ಸದನ ತಲುಪಿ 1 ಗಂಟೆಗೆ ಸದನದಿಂದ ಎದ್ದು ಹೋಗಿದ್ದೆ ಎಂದರು.
ಸದನವನ್ನು ಮುಂದೂಡಿದ ನಂತರ, ಭದ್ರತಾ ಅಧಿಕಾರಿಗಳು ಸಾಮಾನ್ಯ ತಪಾಸಣೆಯ ಸಮಯದಲ್ಲಿ ನೋಟುಗಳ ರಾಶಿಯನ್ನು ಪತ್ತೆ ಮಾಡಿದರು. ಘಟನೆ ಅತ್ಯಂತ ಗಂಭೀರವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ಜೆಪಿ ನಡ್ಡಾ ಹೇಳಿದ್ದಾರೆ.