ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ/ವಿದೇಶ ಯಾವುದೇ ಭಾಗದಿಂದ ಬಂದರೂ, ಪ್ರತಿಯೊಬ್ಬರಿಗೂ ದಕ್ಷಿಣ ಭಾರತದ ಖಾದ್ಯ ದೋಸೆ ಅಂದ್ರೆ ಎಲ್ಲರಿಗೂ ಪ್ರಿಯ. ಅದಕ್ಕಾಗಿಯೇ ಆಹಾರ ಮಾರಾಟಗಾರರು ಈ ಪದಾರ್ಥವನ್ನು ವಿವಿಧ ರೀತಿಯಲ್ಲಿ ಪ್ರಯೋಗಿಸುತ್ತಾರೆ. ಇಲ್ಲಿವರೆಗೂ ಸೆಟ್, ಮಸಾಲೆ, ಪನೀರ್, ಘೀ ದೋಸೆ ಈ ರೀತಿ ದೋಸೆ ನೋಡಿರಬಹುದು ತಿಂದಿರಬಹುದು. ಈಗ ಈ ವಿಧಗಳಿಗೆ ಬುರ್ಜ್ ಖಲೀಫಾ ದೋಸೆ ಕೂಡ ಸೇರ್ಪಡೆಯಾಗಿದೆ.
ಹೌದು, ವಿಡಿಯೋವೊಂದು ವೇಗವಾಗಿ ವೈರಲ್ ಆಗುತ್ತಿದೆ. ಇದರಲ್ಲಿ ಒಬ್ಬ ವ್ಯಕ್ತಿಯು ತನ್ನ ಕಲಾತ್ಮಕ ಮಾದರಿಯನ್ನು ಪ್ರದರ್ಶಿಸುತ್ತಾನೆ. ಈ ವೀಡಿಯೋ ನೋಡಿದ ನಂತರ ನೀವೂ ಆತನ ಅಭಿಮಾನಿಗಳಾಗುತ್ತೀರಿ.
ವೈರಲ್ ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ದೊಡ್ಡ ಹಂಚಿನ ಮೇಲೆ ಎರಡು ದೊಡ್ಡ ದೋಸೆಗಳನ್ನು ಹಾಕಿ ನಂತರ ವಿವಿಧ ರೀತಿಯ ತರಕಾರಿ, ಮಸಾಲೆಗಳನ್ನು ಹಾಕಿ ಬೇಯಿಸಿದ್ದಾರೆ. ಬಳಿಕ ಸುತ್ತಿಕೊಂಡು ಒಂದರ ಮೇಲೊಂದು ಬುರ್ಜ್ ಖಲೀಫಾ ಕಟ್ಟಡದಂತೆ ಕಾಣುವಂತೆ ದೋಸೆಯನ್ನು ವಿನ್ಯಾಸಗೊಳಿಸಿದರು. ಈ ವಿಡಿಯೋವನ್ನು 1.20 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.