ಹೊಸದಿಗಂತ ವರದಿ ಹುಬ್ಬಳ್ಳಿ:
ಇಲ್ಲಿಯ ಕಾರವಾರ ರಸ್ತೆಯ ಎಂಟಿಎಸ್. ಕಾಲೋನಿಯ ಪಾಳು ಬಿದ್ದ ಜಾಗದಲ್ಲಿ ಮಂಗಳವಾರ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಹೆಗ್ಗೇರಿ ಮಾರುತಿ ನಗರದ ನಿವಾಸಿ ವಿಜಯ ಬಸವ(26) ಎಂಬುವರು ಮೃತಪಟ್ಟವರು. ವಿಷಯ ತಿಳಿದ ಹಳೇ ಹುಬ್ಬಳ್ಳಿ ಪೊಲೀಸ್ ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಪಟ್ಟ ವ್ಯಕ್ತಿ ವಿಐ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಸಾವಿಗೆ ಕಾರಣ ಏನೆಂಬುವುದು ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಎಸಿಪಿ ವಿಜಯಕುಮಾರ ತಿಳಿಸಿದರು.