ಹೊಸದಿಗಂತ ವರದಿ, ಸೋಮವಾರಪೇಟೆ:
ಬಸ್ಸೊಳಗೆ ಹಾವೊಂದು ಸೇರಿಕೊಂಡು ಆತಂಕ ಸೃಷ್ಟಿಸಿದ ಘಟನೆ ಶನಿವಾರ ಮಧ್ಯಾಹ್ನ ಇಲ್ಲಿನ ಖಾಸಗಿ ಬಸ್ಸ್ ನಿಲ್ದಾಣದಲ್ಲಿ ನಡೆದಿದೆ.
ಕೂಡ್ಲಿಪೇಟೆಯಿಂದ ಸೋಮವಾರಪೇಟೆ ಮಾರ್ಗವಾಗಿ ವೀರಾಜಪೇಟೆಗೆ ತೆರಳುವ ಪಶುಪತಿ ಬಸ್ ಮಧ್ಯಾಹ್ನ ಪಟ್ಟಣಕ್ಕೆ ಬಂದ ಸಂದರ್ಭ ಇಂಜಿನ್ ಸಮೀಪ ಹಾವೊಂದು ಕಾಣಿಸಿಕೊಂಡಿತು. ಇದರಿಂದ ಕೆಲಕಾಲ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರು.
ಈ ಸಂದರ್ಭ ಸ್ಥಳಕ್ಕಾಗಮಿಸಿದ ಸ್ನೇಕ್ ರಘು ಹಾವನ್ನು ಹಿಡಿದು ಪ್ರಯಾಣಿಕರ ಆತಂಕ ದೂರ ಮಾಡಿದರು.
ಹಿಡಿದಿರುವ ಹಾವು ಕೆರೆ ಹಾವಾಗಿದ್ದು ಬಸ್ಸು ನಿಲ್ಲಿಸಿರುವಾಗ ಸೇರಿಕೊಂಡಿರುವ ಸಾಧ್ಯತೆ ಇದೆ.