ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆಯಲ್ಲಿ ಸಾಗುವಾಗ ಅನುಸರಿಸಬೇಕಾದ ರೂಲ್ಸ್ ಬಗ್ಗೆ ಎಷ್ಟೇ ಜಾಗೃತಿ ವಹಿಸಿದ್ದರೂ ತ್ರಿಬ್ಬಲ್ ರೈಡಿಂಗ್ ಹಾಗೂ ಇನ್ನಿತರ ರೂಲ್ಸ್ ಪದೇ ಪದೆ ಬ್ರೇಕ್ ಆಗುತ್ತವೆ.
ಇದೀಗ ಮುಂಬೈನಲ್ಲಿ ಅವಘಡವೊಂದು ಸಂಭವಿಸಿದ್ದು, ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಲೆಗೆ ಹೆಲ್ಮೆಟ್ ಇಲ್ಲದೆ, ಮೂವರು ವಿದ್ಯಾರ್ಥಿಗಳು ಕಾಲೇಜಿಗೆ ತೆರಳುತ್ತಿದ್ದು, ಬಸ್ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ.
ಪುಣೆಯ ಬಳಿ ವೇಗವಾಗಿ ಬಂದ ಬಸ್ ಹಿಂದಿನಿಂದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್ ಭಾಗಗಳು ಚೆಲ್ಲಾಪಿಲ್ಲಿಯಾಗಿದ್ದು,ಮೂವರ ಮೃತದೇಹಗಳು ದೂರ ದೂರ ಹಾರಿ ಹೋಗಿವೆ. ತಕ್ಷಣವೇ ಜನರು ಆಗಮಿಸಿದ್ದಾರೆ. ಈಗಿನ್ನೂ ದ್ವಿತೀಯ ಪಿಯುಸಿ ಓದುತ್ತಿದ್ದ ಮಕ್ಕಳು ಮಸಣ ಸೇರಿದ್ದಾರೆ. ಹೆತ್ತವರ ಕರುಳು ಕಿತ್ತು ಬರುವಂತೆ ಮಾಡಿದ್ದಾರೆ.
ಯುವಪೀಳಿಗೆಯಲ್ಲಿ ಹೊಸದಿಗಂತ ಕಳಕಳಿಯ ಮನವಿ, ಪೋಷಕರ ಬಗ್ಗೆಯೂ ಆಲೋಚಿಸಿ, ಕಾಲೇಜಿಗೆ ಐದು ನಿಮಿಷ ತಡವಾದೀತು, ಆದರೆ ವೇಗದಿಂದ ಬೈಕ್ ಓಡಿಸುವುದು, ತ್ರಿಬ್ಬಲ್ ರೈಡಿಂಗ್, ಹೆಲ್ಮೆಟ್ ಇಲ್ಲದೆ ಇರುವುದರಿಂದ ನಿಮ್ಮ ಪ್ರಾಣಕ್ಕೇ ಹಾನಿಯಾಗಬಹುದು, ಆದಷ್ಟು ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಬಳಕೆ ಮಾಡಿ. ಸುರಕ್ಷಿತವಾಗಿರಿ.