ಬಳ್ಳಾರಿಯಿಂದ ಸವದತ್ತಿಗೆ ನೂತನ ‌ಬಸ್ ಸಂಚಾರ: ಸಾರಿಗೆ ಸಚಿವ ಶ್ರೀರಾಮುಲು ಚಾಲನೆ

ಹೊಸದಿಗಂತ ವರದಿ, ಬಳ್ಳಾರಿ:

ಪ್ರಸಿದ್ದ ಧಾರ್ಮಿಕ ಕ್ಷೇತ್ರ ಸವದತ್ತಿಗೆ ತೆರಳಲು ನೂತನ ಬಸ್ ಸಂಚಾರಕ್ಕೆ ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರು ಚಾಲನೆ ನೀಡಿದರು. ನಗರದ ನೂತನ ಬಸ್ ನಿಲ್ದಾಣದಲ್ಲಿ ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸವದತ್ತಿಗೆ ರಾಜ್ಯ ಸೇರಿದಂತೆ ನಾನಾ ಕಡೆಯಿಂದ ನಿತ್ಯ ಸಾವಿರಾರು ಜನ ಭಕ್ತರು ಯಲ್ಲಮ್ಮ ದೇವಿ ದರ್ಶನ ‌ಪಡೆಯುತ್ತಿದ್ದು, ಈ ಭಾಗದಲ್ಲೂ ಸಾಕಷ್ಟು ಭಕ್ತರಿದ್ದು, ಅವರಿಗೆ ಅನುಕೂಲ ವಾಗಲು ಬಳ್ಳಾರಿಯಿಂದ ಸವದತ್ತಿಗೆ ಬಸ್ ಸಂಚಾರಕ್ಕೆ ‌ಚಾಲನೆ ನೀಡಲಾಗಿದೆ, ಭಕ್ತರು ಇದರ ಸದುಪಯೋಗವನ್ನು ‌ಪಡೆದುಕೊಳ್ಳಬಹುದು ಎಂದರು. ಈ ಸಂದರ್ಭದಲ್ಲಿ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ಬೂಡಾ ಅದ್ಯಕ್ಷ ಕಾರ್ಕಲತೋಟ ‌ಪಾಲನ್ನ, ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಮಾಜಿ ಸಂಸದ ರಾದ ಸಣ್ಣ ಫಕೀರಪ್ಪ, ಜೆ.ಶಾಂತಾ, ರಾಬಕೋ ನಿರ್ದೇಶಕ ವೀರಶೇಖರ್ ರೆಡ್ಡಿ, ಶ್ರೀನಿವಾಸ್ ‌ಮೋತ್ಕರ್, ಕೃಷ್ಣಾರೆಡ್ಡಿ ಸೇರಿದಂತೆ ಸಾರಿಗೆ ಇಲಾಖೆ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!