ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುಲಿಗೆಮ್ಮ ದೇವಸ್ಥಾನದ ಪಾದಯಾತ್ರೆಗೆ ಹೊರಟಿದ್ದವರ ಮೇಲೆ ಖಾಸಗಿ ಬಸ್ ಹರಿದು ಮೂವರ ಸಾವನ್ನಪ್ಪಿ, ನಾಲ್ಕು ಜನರು ಗಾಯಗೊಂಡ ಘಟನೆ ಕೂಕನಪಳ್ಳಿ ಗ್ರಾಮದ ರಾ.ಹೆ. 50 ರಲ್ಲಿ ನಡೆದಿದೆ.
ಅನ್ನಪೂರ್ಣ(40), ಪ್ರಕಾಶ್(25), ಶರಣಪ್ಪ(19) ಮೃತಪಟ್ಟವರು. ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಸ್ಥಾನಕ್ಕೆ ಶನಿವಾರ ಪಾದಯಾತ್ರೆಗೆ ಹೊರಟಿದ್ದರು. ಇನ್ನು ಕೇವಲ ಕೇವಲ 3 ಗಂಟೆ ಕಳೆದರೆ ದೇವಸ್ಥಾನ ತಲುಪುತ್ತಿದ್ದರು. ಅಷ್ಟರಲ್ಲಿ ಈ ದುರ್ಘಟನೆ ನಡೆದಿದೆ.
ಪ್ರಾಣಾಪಾಯದಿಂದ ಪಾರಾದ ನಾಲ್ವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಡಾ ರಾಮ್ ಅರಸಿದ್ದಿ ಭೇಟಿ ಪರಿಶೀಲನೆ ನಡೆಸಿದ್ದಾರೆ.