ಶೋರೂಂನ ಕಾರ್ಗೋ ಲಿಫ್ಟ್‌ನಲ್ಲಿ ತಲೆ ಸಿಲುಕಿ ಉದ್ಯಮಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೀರತ್‌ನ ಸೂರಜ್‌ಕುಂಡ ಪ್ರದೇಶದಲ್ಲಿ ಶೋರೂಂನ ಲಿಫ್ಟ್‌ನಲ್ಲಿ ತಲೆ ಸಿಲುಕಿ ಉದ್ಯಮಿಯೊಬ್ಬರು ಮೃತಪಟ್ಟಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ದೇವನಗರದಲ್ಲಿರುವ ‘ಇಂಡಿಯನ್ ಸ್ಪೋರ್ಟ್ಸ್ ಹೌಸ್’ ಶೋರೂಂನ ಮಾಲೀಕರಾದ ಹರ್ವಿಂದರ್ ಸಿಂಗ್ (63) ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ.

ಶನಿವಾರ ಸಂಜೆ ಹರ್ವಿಂದರ್ ಸಿಂಗ್ ಅವರು ಶೋರೂಂನ ಎರಡನೇ ಮಹಡಿಗೆ ತೆರಳಲು ಕಾರ್ಗೋ ಲಿಫ್ಟ್ ಬಳಸುತ್ತಿದ್ದರು. ಈ ವೇಳೆ ಲಿಫ್ಟ್ ಚಲಿಸುತ್ತಿದ್ದಾಗ ತಾವು ಎಲ್ಲಿ ತಲುಪಿದ್ದೇವೆ ಎಂಬುದನ್ನು ನೋಡಲು ತಲೆಯನ್ನು ಹೊರಗೆ ಹಾಕಿದಾಗ ಏಕಾಏಕಿ ವಿದ್ಯುತ್ ಪೂರೈಕೆ ಪುನಃ ಆರಂಭವಾಗುತ್ತಿದ್ದಂತೆಯೇ ಲಿಫ್ಟ್ ಚಲನೆಗೈದು, ಅವರ ತಲೆ ಲಿಫ್ಟ್‌ನ ದ್ವಾರದ ನಡುವೆ ಸಿಲುಕಿತ್ತು.

ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಸಿಬ್ಬಂದಿ ಅದನ್ನು ಗಮನಿಸಲು ಸುಮಾರು 30 ನಿಮಿಷಗಳು ತಗುಲಿದ್ದವು. ತಕ್ಷಣವೇ ಸ್ಥಳೀಯರು ಮತ್ತು ಸಿಬ್ಬಂದಿಯ ಸಹಕಾರದಿಂದ ಲಿಫ್ಟ್ ತೆರೆದು ಗಂಭೀರವಾಗಿ ಗಾಯಗೊಂಡ ಸಿಂಗ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಸಾವನ್ನಪ್ಪಿದ್ದಾರೆಂದು ಘೋಷಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!