ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮೆಟ್ರೋ ಮಹಿಳಾ ಬೋಗಿಯಲ್ಲಿ ಏಕಾ ಏಕಿ ಹಾವು ಕಾಣಿಸಿಕೊಂಡಿದೆ ಎಂದು ಹೇಳಲಾಗಿದ್ದು, ಮಹಿಳೆಯರು ವಿಚಲಿತರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಾವು ಕಂಡ ಮಹಿಳೆಯರು ಭಯಭೀತರಾಗಿದ್ದು ಕಿರುಚುತ್ತಾ, ಆಸನಗಳ ಮೇಲೆ ಹಾರುವುದು ಮತ್ತು ಒಂದು ಬದಿಗೆ ಧಾವಿಸುವುದು ಕಂಡುಬಂದಿದೆ.
ವೀಡಿಯೊದಲ್ಲಿ ಹಾವು ಕಾಣಿಸದಿದ್ದರೂ, ಗೊಂದಲದ ಪರಿಣಾಮ ಪ್ರಯಾಣಿಕರು ಹಾವು ಇದೆ ಎಂದೇ ಮಹಿಳೆಯರು ನಂಬಿದ್ದರು ಎಂದು ಸೂಚಿಸುತ್ತದೆ. ಘಟನೆ ನಡೆದ ನಿಖರವಾದ ಮೆಟ್ರೋ ಮಾರ್ಗ ಅಥವಾ ನಿಲ್ದಾಣದ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ.
View this post on Instagram