ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಪಂದ್ಯಗಳು ಮುಂದೂಡಲ್ಪಟ್ಟಿದ್ದರಿಂದ ಬಹುತೇಕ ಇಂಗ್ಲೆಂಡ್ ತಂಡದ ಆಟಗಾರರು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಾಗಿ ಐಪಿಎಲ್ ಪ್ಲೇ ಆಫ್ ತಪ್ಪಿಸಿಕೊಳ್ಳಲಿದ್ದಾರೆ.
ಗುಜರಾತ್ ಟೈಟನ್ಸ್ ತಂಡದ ಸ್ಫೋಟಕ ಬ್ಯಾಟರ್ ಜೋಸ್ ಬಟ್ಲರ್ ವಿಂಡೀಸ್ ವಿರುದ್ಧದ ಏಕದಿನ ಸರಣಿಯನ್ನಾಡಲು ಏಪ್ರಿಲ್ 26ರಂದು ತವರಿಗೆ ಮರಳಲಿದ್ದಾರೆ. ಅವರ ಜಾಗಕ್ಕೆ ಮತೋರ್ವ ಸ್ಫೋಟಕ ಬ್ಯಾಟರ್ ಸೇರಿಕೊಳ್ಳಲಿದ್ದಾರೆ.
ಗುಜರಾತ್ ಟೈಟಾನ್ಸ್ (GT) ತಂಡವು ಜೋಸ್ ಬಟ್ಲರ್‌ರ ಬದಲಿಗೆ ಶ್ರೀಲಂಕಾದ ಆರಂಭಿಕ ಬ್ಯಾಟರ್ ಕುಸಾಲ್ ಮೆಂಡಿಸ್‌ರನ್ನು ಆಯ್ಕೆ ಮಾಡಿದೆ. GT ತಂಡದ ಕೊನೆಯ ಲೀಗ್ ಹಂತದ ಪಂದ್ಯವಾದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ (ಮೇ 25, 2025) ನಂತರ ಅವರು ತಂಡವನ್ನು ತ್ಯಜಿಸಲಿದ್ದಾರೆ.
ಕುಸಾಲ್ ಮೆಂಡಿಸ್ ಶ್ರೀಲಂಕಾದ ಅಂತರರಾಷ್ಟ್ರೀಯ ಕ್ರಿಕೆಟ್ ಆಟಗಾರರಾಗಿದ್ದು, ಈಗ ಐಪಿಎಲ್‌ನಲ್ಲಿ ಚೊಚ್ಚಲ ಪಂದ್ಯವನ್ನು ಆಡಲಿದ್ದಾರೆ. ಇತ್ತೀಚೆಗೆ, ಅವರು ಪಾಕಿಸ್ತಾನ ಸೂಪರ್ ಲೀಗ್ 2025 ರಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವನ್ನು ಪ್ರತಿನಿಧಿಸಿದ್ದರು.