ಈ 10 ಷೇರುಗಳನ್ನು ಇವತ್ತೇ ಖರೀದಿಸಿ! ಇಲ್ಲಾಂದ್ರೆ ಪಶ್ಚಾತ್ತಾಪ ಪಡುತ್ತೀರಾ ಗ್ಯಾರಂಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೂಡಿಕೆ ನಿರ್ಧಾರಗಳನ್ನು ಮಾಡಲು ಬ್ರೋಕರೇಜ್ ಸಂಸ್ಥೆಗಳ ಶಿಫಾರಸ್ಸುಗಳು ಮಹತ್ವದ ಪಾತ್ರ ವಹಿಸುತ್ತವೆ. ಪ್ರತಿಷ್ಠಿತ ಸಂಸ್ಥೆಗಳಾದ ಮೋತಿಲಾಲ್ ಓಸ್ವಾಲ್, ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಮತ್ತು ಆಂಟಿಕ್ ಸ್ಟಾಕ್ ಬ್ರೋಕಿಂಗ್ ಕೆಲವು ಪ್ರಮುಖ ಷೇರುಗಳ ಕುರಿತಾಗಿ ಬಲವಾದ ಶಿಫಾರಸ್ಸುಗಳನ್ನು ನೀಡಿವೆ. ಈ ಕಂಪನಿಗಳು ನಿರ್ದಿಷ್ಟ ಷೇರುಗಳಿಗೆ ಬೈ (Buy) ರೇಟಿಂಗ್ ನೀಡಿ, ಮುಂದಿನ ದಿನಗಳಲ್ಲಿ ಹೂಡಿಕೆಗೆ ಉತ್ತಮ ಪ್ರಾರಂಭಗಳನ್ನು ನಿರೀಕ್ಷಿಸುವ ಸಲಹೆ ನೀಡಿವೆ. ಈ ಪಟ್ಟಿ ನಿಮ್ಮ ಹೂಡಿಕೆ ಯೋಜನೆಗೆ ಮಾರ್ಗದರ್ಶಿಯಾಗಿ ಸಹಾಯಕವಾಗಬಹುದು.

ಇಂಡಿಯನ್ ಹೋಟೆಲ್ಸ್
ಟಾಟಾ ಗ್ರೂಪ್‌ನ ಇಂಡಿಯನ್ ಹೋಟೆಲ್ಸ್ ಕಂಪನಿ ಲಿಮಿಟೆಡ್‌ಗೆ ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಬೈ ರೇಟಿಂಗ್ ನೀಡಿದೆ. ಈ ಷೇರಿನ ಟಾರ್ಗೆಟ್ ಬೆಲೆಯನ್ನು ಒಂದು ವರ್ಷಕ್ಕೆ 960 ರೂಪಾಯಿ ಎಂದು ನೀಡಲಾಗಿದೆ.

ಐಸಿಐಸಿಐ ಬ್ಯಾಂಕ್
ಮೋತಿಲಾಲ್ ಓಸ್ವಾಲ್ ಐಸಿಐಸಿಐ ಬ್ಯಾಂಕ್ ಷೇರಿನ ಬಗ್ಗೆಯೂ ಸಲಹೆ ನೀಡಿದೆ. ಒಂದು ವರ್ಷಕ್ಕೆ ಟಾರ್ಗೆಟ್ 1,550 ರೂಪಾಯಿ ನೀಡಲಾಗಿದೆ.

ವರುಣ್ ಬೇವರೇಜಸ್
ವರುಣ್ ಬೇವರೇಜಸ್ ಷೇರನ್ನು ಸಹ ಖರೀದಿಸಲು ಮೋತಿಲಾಲ್ ಓಸ್ವಾಲ್ ಸಲಹೆ ನೀಡಿದೆ. ಈ ಷೇರಿನ ಟಾರ್ಗೆಟ್ ಬೆಲೆ 680 ರೂಪಾಯಿ ನೀಡಲಾಗಿದೆ. ಮಾರ್ಚ್ 21 ರಂದು ಈ ಷೇರು 538.40 ರೂಪಾಯಿಗೆ ಕೊನೆಗೊಂಡಿತು.

ಅಂಬರ್ ಎಂಟರ್‌ಪ್ರೈಸಸ್
ಮೋತಿಲಾಲ್ ಓಸ್ವಾಲ್ ಅಂಬರ್ ಎಂಟರ್‌ಪ್ರೈಸಸ್ ಷೇರಿನಲ್ಲಿಯೂ ಹೂಡಿಕೆ ಮಾಡಲು ಸಲಹೆ ನೀಡಿದೆ. ಈ ಷೇರಿನ ಟಾರ್ಗೆಟ್ ಬೆಲೆಯನ್ನು ಒಂದು ವರ್ಷಕ್ಕೆ 7,800 ರೂಪಾಯಿ ಎಂದು ಹೇಳಿದೆ.

ಎಸ್ಆರ್ಎಫ್
ಮೋತಿಲಾಲ್ ಓಸ್ವಾಲ್ ಕಮೊಡಿಟಿ ಕೆಮಿಕಲ್ಸ್ ಕಂಪನಿ ಎಸ್ಆರ್ಎಫ್ ಷೇರ್ ಗೆ ಬೈ ರೇಟಿಂಗ್ ನೀಡುತ್ತಾ ಟಾರ್ಗೆಟ್ ಬೆಲೆ 3,540 ರೂಪಾಯಿ ನೀಡಲಾಗಿದೆ. ಮಾರ್ಚ್ 21 ರಂದು ಷೇರು 3023.90 ರೂಪಾಯಿಗೆ ಕೊನೆಗೊಂಡಿತು.

ಎಲ್ ಟಿ ಐ ಮೈಂಡ್ ಟ್ರೀ
ಬ್ರೋಕರೇಜ್ ಸಂಸ್ಥೆ ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಮುಂದಿನ 15 ದಿನಗಳವರೆಗೆ ಎಲ್ ಟಿ ಐ ಮೈಂಡ್ ಟ್ರೀನಲ್ಲಿ ಹೂಡಿಕೆ ಮಾಡಲು ಸಲಹೆ ನೀಡಿದೆ. ಇದರ ಟಾರ್ಗೆಟ್ ಬೆಲೆ 4730 ರೂಪಾಯಿ ನೀಡಲಾಗಿದೆ.

ಎಸ್‌ಜೆವಿಎನ್‌
ನವರತ್ನ ಪಿಎಸ್‌ಯು ಸ್ಟಾಕ್ ಎಸ್‌ಜೆವಿಎನ್‌ಬಗ್ಗೆಯೂ ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಸಲಹೆ ನೀಡಿದೆ. ಮುಂದಿನ 45 ದಿನಗಳವರೆಗೆ ಖರೀದಿಸಲು ಸಲಹೆ ನೀಡಲಾಗಿದೆ. ಇದರ ಟಾರ್ಗೆಟ್ ಬೆಲೆ 100.50 ರೂಪಾಯಿಯಿಂದ 108 ರೂಪಾಯಿ ವರೆಗೆ ನೀಡಲಾಗಿದೆ.

ಭಾರತ್ ಎಲೆಕ್ಟ್ರಾನಿಕ್ಸ್
ಆಂಟಿಕ್ ಸ್ಟಾಕ್ ಬ್ರೋಕಿಂಗ್ ಭಾರತ್ ಎಲೆಕ್ಟ್ರಾನಿಕ್ಸ್ ಷೇರನ್ನು ಖರೀದಿಸಲು ಸಲಹೆ ನೀಡಿದೆ. ದೀರ್ಘಾವಧಿಗೆ ಇದರ ಟಾರ್ಗೆಟ್ 376 ರೂಪಾಯಿ ನೀಡಲಾಗಿದೆ.

ಹಿಂದೂಸ್ತಾನ್ ಏರೋನಾಟಿಕ್ಸ್
ಹಿಂದೂಸ್ತಾನ್ ಏರೋನಾಟಿಕ್ಸ್ ಷೇರಿನ ಬಗ್ಗೆಯೂ ಆಂಟಿಕ್ ಸ್ಟಾಕ್ ಬ್ರೋಕಿಂಗ್ ಬೈ ರೇಟಿಂಗ್ ನೀಡುತ್ತಾ 4,887 ರೂಪಾಯಿ ಟಾರ್ಗೆಟ್ ನೀಡಲಾಗಿದೆ.

ಭಾರತ್ ಡೈನಾಮಿಕ್ಸ್
ಭಾರತ್ ಡೈನಾಮಿಕ್ಸ್ ಷೇರನ್ನು ಸಹ ಖರೀದಿಸಲು ಆಂಟಿಕ್ ಸ್ಟಾಕ್ ಬ್ರೋಕಿಂಗ್ ಸಲಹೆ ನೀಡಿದೆ. ಇದರ ಟಾರ್ಗೆಟ್ ಬೆಲೆ 1,351 ರೂಪಾಯಿ ನೀಡಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!