ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ನಾಲ್ಕು ರಾಜ್ಯಗಳ 5 ವಿಧಾನಸಭಾ ಸ್ಥಾನಗಳಿಗೆ ಜೂನ್ 19ರಂದು ನಡೆದ ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ.
ಗುಜರಾತ್, ಕೇರಳ, ಪಶ್ಚಿಮ ಬಂಗಾಳ ಮತ್ತು ಪಂಜಾಬ್‌ನ ಐದು ವಿಧಾನಸಭಾ ಸ್ಥಾನಗಳಿಗೆ ಉಪ ಚುನಾವಣೆ ನಡೆದಿತ್ತು.
ಗುಜರಾತ್‌ನ ಕಡಿ ಮತ್ತು ವಿಸಾವದರ್ ವಿಧಾನಸಭೆ ಸ್ಥಾನಗಳು, ಕೇರಳದ ನೀಲಂಬೂರ್, ಪಶ್ಚಿಮ ಬಂಗಾಳದ ಕಾಳಿಗಂಜ್ ಮತ್ತು ಪಂಜಾಬ್‌ನ ಲುಧಿಯಾನ ವಿಧಾನಸಭಾ ಸ್ಥಾನಗಳಿಗೆ ಉಪ ಚುನಾವಣೆ ನಡೆದಿದೆ.ಈ ಕ್ಷೇತ್ರಗಳ ಸದಸ್ಯರ ಅಕಾಲಿಕ ಮರಣ ಮತ್ತು ರಾಜೀನಾಮೆಯಿಂದಾಗಿ ಸ್ಥಾನಗಳು ಖಾಲಿ ಇದ್ದವು. ಈ ಸ್ಥಾನಗಳಿಗೆ ಉಪಚುನಾವಣೆ ನಡೆದಿದ್ದು, ಇಂದು ಫಲಿತಾಂಶ ಪ್ರಕಟವಾಗಲಿದೆ.