ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಅನೇಕ ಕಂಪೆನಿಗಳು ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡುತ್ತಿದ್ದು, ಇದೀಗ ಎಡ್ಟೆಕ್ ಯೂನಿಕಾರ್ನ್ ಬೈಜುಸ್ 1,000ಕ್ಕೂ ಹೆಚ್ಚು ಉದ್ಯೋಗಿಗಳನ್ನ ವಜಾಗೊಳಿಸಿದೆ.
ಈ ಕುರಿತು ಮಾಹಿತಿ ನೀಡಿದ ಕಂಪನಿಯ ಎಂಜಿನಿಯರಿಂಗ್ ತಂಡದ ಕೆಲಸಗಾರ , ಇಂದು ಬೆಳಿಗ್ಗೆ, ಪ್ರತಿ ಟೆಕ್ ತಂಡದಲ್ಲಿ ಹಲವು ಜನರನ್ನ ಕೆಲಸದಿಂದ ವಜಾಗೊಳಿಸಲಾಗಿದೆ.
ನನ್ನ ತಂಡದಲ್ಲೂ ಕಡಿತಗಳು ಸಂಭವಿಸಿದವು. ಒಟ್ಟಾರೆಯಾಗಿ, ಎಲ್ಲಾ ಎಂಜಿನಿಯರಿಂಗ್ ತಂಡಗಳಲ್ಲಿ 15 ಪ್ರತಿಶತದಷ್ಟು ಜನರನ್ನ ಕೆಲಸದಿಂದ ತೆಗೆದುಹಾಕಲಾಗಿದೆ. 1,000ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂದರು.
ಕಂಪನಿಯು ಎಲ್ಲಾ ಫ್ರೆಶರ್ಗಳನ್ನ ಕೆಲಸದಿಂದ ವಜಾಗೊಳಿಸಿದೆ ಎಂದು ಹೇಳಿದರು.