ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶ ವಿದೇಶದಲ್ಲೂ ಭಾರೀ ಸದ್ದು ಮಾಡಿದ್ದ ಧರ್ಮಸ್ಥಳ ಆಸುಪಾಸಿನಲ್ಲಿ ನೂರಾರು ಶವ ಹೂತಿದ್ದೇನೆ ಪ್ರಕರಣದ ದೂರುದಾರನ ಬಂಧನದ ಬೆನ್ನಲ್ಲೇ ಆತನ ಮಾಹಿತಿ ಬಹಿರಂಗಗೊಂಡಿದ್ದು, ಮಾಸ್ಕ್ ಹಿಂದಿನ ಕುತೂಹಲಕ್ಕೆ ತೆರೆ ಬಿದ್ದಿದೆ.
ಮೂಲಗಳ ಮಾಹಿತಿ ಪ್ರಕಾರ ಈತನ ಹೆಸರು ಸಿಎನ್. ಚಿನ್ನಯ್ಯ ಯಾನೇ ಚೆನ್ನ ಎಂದು ಹೇಳಲಾಗಿದ್ದು, ಈತ ಮೂಲತಃ ಮಂಡ್ಯ ಜಿಲ್ಲೆಯವನು ಎನ್ನಲಾಗುತ್ತಿದೆ.
ಶುಕ್ರವಾರ ತನಿಖೆಗೆ ಬಂದಿದ್ದ ಈತನನ್ನು ಶನಿವಾರ ಮುಂಜಾನೆಯ ತನಕವೂ ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಅದಾದ ಬಳಿಕ ಈತನನ್ನು ಬಂಧಿಸುವ ತೀರ್ಮಾನಕ್ಕೆ ಬರಲಾಗಿತ್ತು. ಈ ನಡುವೆ ಆತ ತನ್ನ ಸಹೋದರ ವಿಚಾರವನ್ನೂ ಪ್ರಸ್ತಾವಿಸಿದ್ದ ಎನ್ನಲಾಗಿದ್ದು, ಪೊಲೀಸರು ಆತನಿದ್ದ ಸ್ಥಳಕ್ಕೆ ತೆರಳಿ ಅಲ್ಲಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂಬ ಮಾಹಿತಿ ಕೂಡಾ ಲಭ್ಯವಾಗಿದೆ.