ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನ ಮಂಡಲ ಅಧಿವೇಶನ ಮುಗಿದಿದ್ದು, ವರಿಷ್ಠರ ಜತೆಗೆ ಚರ್ಚಿಸಿ ಸಚಿವ ಸಂಪುಟ ವಿಸ್ತರಿಸುವ ಮೂಲಕ ಖಾಲಿಯಿರುವ ಆರು ಸ್ಥಾನಗಳನ್ನು ತುಂಬಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಅಧಿವೇಶನ ಮುಗಿಯಲೆಂದು ಕಾಯುತ್ತಿದ್ದೆ.ವರಿಷ್ಠರ ಸೂಚನೆಯಂತೆ ಸಂಪುಟಕ್ಕೆ ಸೇರಿಸಿಕೊಳ್ಳುವವರ ಪಟ್ಟಿ ಕಳುಹಿಸುವೆ ಅಥವಾ ದೆಹಲಿಗೆ ತೆರಳಿ ಖುದ್ದು ಮಾತುಕತೆ ನಡೆಸಿ ಒಪ್ಪಿಗೆ ಪಡೆಯುವೆ ಎಂದರು.
ಇನ್ನು ಗುತ್ತಿಗೆದಾರರ ಸಂಘದವರಿಗೆ ಈಗಲೂ ಹೇಳುವೆ. 40 ಪರ್ಸೆಂಟ್ ಕಮಿಷನ್ ಆರೋಪದ ಬಗ್ಗೆ ದೂರು ಅಥವಾ ಸಣ್ಣ ಪುರಾವೆ ಕೊಡಿ, ತಕ್ಷಣ ಲೋಕಾಯುಕ್ತ ತನಿಖೆಗೆ ಒಪ್ಪಿಸುವೆ ಎಂದು ಸಿಎಂ ಬೊಮ್ಮಾಯಿ ಪುನರುಚ್ಚರಿಸಿದರು.