ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗಿರಿಧಾಮದಲ್ಲಿ ಜೂನ್ 19 ರಂದು ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉನ್ನತ ಶಿಕ್ಷಣ ಖಾತೆ ಸಚಿವ ಡಾ. ಎಂ.ಸಿ.ಸುಧಾಕರ್ಗೆ ತಿಳಿಸಿದ್ದು, ಗಿರಿಧಾಮದಲ್ಲಿ ಬರದ ಸಿದ್ದತೆಗಳು ನಡೆಯುತ್ತಿವೆ.
ನಂದಿ ಗಿರಿಧಾಮದ ಸುತ್ತಮುತ್ತ ಭೌಗೋಳಿಕ ವಿಸ್ತೀರ್ಣ ಹಂಚಿಕೊಂಡಿರುವ ಬಯಲುಸೀಮೆಯ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಸಚಿವ ಸಂಪುಟ ಸಭೆ ವರದಾನವಾಗುವ ನಿರೀಕ್ಷೆಯಿದೆ. ತ್ರಿವಳಿ ಜಿಲ್ಲೆಗಳ ಸಮಸ್ಯೆಗಳು, ಮೂಲಭೂತ ಸಮಸ್ಯೆಗಳು, ವಿಶೇಷ ಪ್ಯಾಕೇಜ್‍ಗಳನ್ನು ಘೋಷಣೆ ಮಾಡುವ ನಿರೀಕ್ಷೆಯಿದೆ.