ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ವರ್ಷ ಲೋಕಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಸಿದ್ಧತೆ ನಡೆಸುತ್ತಿದ್ದು, ಇತ್ತ ವಿಪಕ್ಷಗಳು ಕೂಡ ಮೋದಿ ಸರಕಾರ ವಿರುದ್ಧ ಮಹಾ ಮೈತ್ರಿ ಮಾಡಿಕೊಂಡು ಹೋರಾಟದ ಅಖಾಡಕ್ಕೆ ಇಳಿದಿದೆ.
ಇತ್ತ ಬಿಜೆಪಿ ತನ್ನ ಸಾಧನೆಗಳನ್ನು ಮುಂದಿಟ್ಟುಕೊಂಡು ಮತ ಕೇಳಲು ತಯಾರಿ ನಡೆಸಿದೆ.
ಈ ಬೆಳವಣಿಗೆ ನಡುವೆ ಕೇಂದ್ರ ಸರ್ಕಾರದ ಸಚಿವ ಸಂಪುಟಕ್ಕೆ ಸರ್ಜರಿ ನಡೆಯಲಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಸಂಪುಟ ಪುನಾರಚನೆ ಮಾಡಲು ಪ್ರಧಾನಿ ಮುಂದಾಗಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಜುಲೈ 3ಕ್ಕೆ ಕೇಂದ್ರ ಮಂತ್ರಿಮಂಡಲದ ಸಭೆ ಕರೆದಿದ್ದಾರೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಜೆಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮಹತ್ವದ ಮಾತುಕತೆ ನಡೆಸಿದ್ದಾರೆ.ಜುಲೈ 3 ರಂದು ಕೇಂದ್ರ ಮಂತ್ರಿ ಮಂಡಲದ ಸಭೆ ನಡೆಯಲಿದೆ. ಜುಲೈ 3ನೇ ವಾರದಿಂದ ಮಳೆಗಾಲದ ಅಧಿವೇಶನ ಆರಂಭಗೊಳ್ಳಲಿದೆ. ಇದಕ್ಕೂ ಮೊದಲು ಕೇಂದ್ರ ಸಂಪುಟ ಪುನಾರಚನೆ ಆಗುವ ಸಾಧ್ಯತೆ ಇದೆ.
ಚುನಾವಣೆ ದೃಷ್ಟಿಯಿಂದ ಕೆಲ ಸಮುದಾಯದ ನಾಯಕರಿಗೆ ಮಣೆಹಾಕಲು ಕೇಂದ್ರ ಮುಂದಾಗಿದೆ. ಹೀಗಾಗಿ ಯಾರಿಗೆ ಕೊಕ್, ಯಾರಿಗೆ ಸಚಿವನ ಸ್ಥಾನ ಸಿಗಲಿದೆ ಅನ್ನೋ ಚರ್ಚೆ ಜೋರಾಗಿದೆ.
ಜೂನ್ 28 ರಂದು ಪ್ರಧಾನಿ ಮೋದಿ ಹಲವು ಸುತ್ತಿನ ಸಭೆ ನಡೆಸಿದ್ದಾರೆ. ಲೋಕಸಭಾ ಚುನಾವಣೆ ಜೊತೆ ಜೊತೆಗೆ ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ, ಚತ್ತೀಸಘಡ ರಾಜ್ಯದ ವಿಧಾನಸಭಾ ಚುನಾವಣೆಗಳೂ ನಡೆಯಲಿದೆ. ಹೀಗಾಗಿ ಬಿಜೆಪಿ ಚುನಾವಣೆ ರಣತಂತ್ರದ ಜೊತೆಗೆ ಸಂಪುಟ ವಿಸ್ತರಣೆಗೂ ಮುಂದಾಗಿದೆ. ಹಿಮಾಚಲ ಪ್ರದೇಶ ಹಾಗೂ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸೋಲು ಬಿಜೆಪಿಗೆ ಪಾಠ ಕಲಿಸಿದ. ಹೀಗಾಗಿ ಎಚ್ಚರಿಕೆ ಹೆಜ್ಜ ಇಡಲು ಬಿಜೆಪಿ ಸಜ್ಜಾಗಿದೆ.