ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆಯರ ಸಬಲೀಕರಣಕ್ಕಾಗಿ 7.50 ಕೋಟಿ ರೂಪಾಯಿ ವೆಚ್ಚದಲ್ಲಿ ಕೆಫೆ ಸಂಜೀವಿನ ಹೆಸರಿನ 50 ಕೆಫೆಗಳು ರಾಜ್ಯಾದ್ಯಂತ ತಲೆ ಎತ್ತಲಿವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಗ್ರಾಮೀಣ ಪ್ರದೇಶದ ಬೇಡಿಕೆ ಹಾಗೂ ಪೂರೈಕೆಯ ಕೊರತೆಯನ್ನು ನೀಗಿಸಲು ಇದು ಸಹಾಯವಾಗಲಿದೆ. ಆರೋಗ್ಯಕರ ಹಾಗೂ ಕಡಿಮೆ ದರದಲ್ಲಿ ಸಾಂಪ್ರದಾಯಿಕ ಆಹಾರ ನೀಡಲಾಗುತ್ತದೆ.