ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ನಾ ಧರ್ಮಕ್ಕೆ ಮಾನ್ಯತೆ ನೀಡುವಂತೆ ಒತ್ತಾಯಿಸಿ ಬುಡಕಟ್ಟು ಸಂಘಟನೆ ಆದಿವಾಸಿ ಸೆಂಗೆಲ್ ಅಭಿಯಾನ್(ಎಎಸ್ಎ) ಡಿಸೆಂಬರ್ 30 ರಂದು “ಸಾಂಕೇತಿಕ” ಭಾರತ್ ಬಂದ್ ಗೆ ಕರೆ ನೀಡಿದೆ.
ಎಎಸ್ಎ ಅಧ್ಯಕ್ಷ ಸಲ್ಖಾನ್ ಮುರ್ಮು ಮಾತನಾಡಿ, ಸರ್ನಾ ಧರ್ಮ ಸಂಹಿತೆಯು ದೇಶದ 15 ಕೋಟಿ ಬುಡಕಟ್ಟು ಜನಾಂಗದವರ ಗುರುತಾಗಿದೆ ಮತ್ತು ಬುಡಕಟ್ಟು ಸಮುದಾಯದ ಧರ್ಮಕ್ಕೆ ಮಾನ್ಯತೆ ನಿರಾಕರಿಸುವುದುಸಾಂವಿಧಾನಿಕ ಅಪರಾಧಕ್ಕೆ ಸಮಾನ ಎಂದಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಬುಡಕಟ್ಟು ಜನಾಂಗದವರ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಂಡಿವೆ ಎಂದು ಆರೋಪಿಸಿದ್ದಾರೆ. 1951 ರ ಜನಗಣತಿಯು ಸರ್ನಾ ಧರ್ಮಕ್ಕೆ ಪ್ರತ್ಯೇಕ ಕೋಡ್ ಅನ್ನು ನೀಡಿತ್ತು. ಆದರೆ ನಂತರ ಕಾಂಗ್ರೆಸ್ ಅದನ್ನು ತೆಗೆದುಹಾಕಿತು ಎಂದು ಮುರ್ಮು, ಈಗ ಬಿಜೆಪಿ ಆದಿವಾಸಿಗಳನ್ನು ಹಿಂದೂಗಳಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಎಎಸ್ಎ ಬುಡಕಟ್ಟು ಸಮುದಾಯದ ಹಿತಾಸಕ್ತಿ ಕಾಪಾಡುವ ಪರವಾಗಿದೆ. ಯಾವ ಪಕ್ಷ ಸರ್ನಾ ಧರ್ಮಕ್ಕೆ ಮಾನ್ಯತೆ ನೀಡುತ್ತದಯೋ ಆ ಪಕ್ಷಕ್ಕೆ ನಾವು ಮತ ಹಾಕುತ್ತೇವೆ ಎಂದು ಮುರ್ಮು ಹೇಳಿದ್ದಾರೆ.