ಶಾಂತವಾಗುತ್ತಿದೆ ‘ರೆಮಾಲ್’: ಸಹಜಸ್ಥಿತಿಯತ್ತ ಈಶಾನ್ಯ ರಾಜ್ಯಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರೆಮಾಲ್ ಚಂಡಮಾರುತ (Cyclone Remal) ಶಾಂತವಾಗುತ್ತಿದ್ದು, ಗಂಟೆಗೆ 135 ಕಿಲೋಮೀಟರ್ ವೇಗದಲ್ಲಿ ಅಪ್ಪಳಿಸಿದ ಚಂಡಮಾರುತದ ವೇಗ ನಿಧಾನವಾಗಿ ಕುಸಿಯುತ್ತಿದೆ. ಇಂದು ರಾತ್ರಿ ಹೊತ್ತಿಗೆ ಗಾಳಿಯ ವೇಗ ಗಂಟೆಗೆ 70-80 ಕಿಲೋಮೀಟರ್‌ನಿಂದ 50-70 ಕಿಲೋಮೀಟರ್‌ಗೆ ಕುಸಿಯುವ ಸಾಧ್ಯತೆಯಿದೆ.

ಭಾನುವಾರ ತಡರಾತ್ರಿ ಬಾಂಗ್ಲಾದೇಶ, ಪಶ್ಚಿಮ ಬಂಗಾಳ ಕರಾವಳಿ ಗಡಿಯ ತೀರಕ್ಕೆ ಗಂಟೆಗೆ 135 ಕಿಲೋಮೀಟರ್ ವೇಗದಲ್ಲಿ ಅಪ್ಪಳಿಸಿತ್ತು. ಪರಿಣಾಮ ಪಶ್ಚಿಮ ಬಂಗಾಳ , ಒಡಿಶಾ, ಅಸ್ಸಾಂ ಸೇರಿ ಈಶಾನ್ಯ ರಾಜ್ಯಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ನೂರಾರು ಮರಗಳು, ವಿದ್ಯುತ್ ಕಂಬಗಳು ಉರುಳಿ ಅಪಾರ ಹಾನಿಯುಂಟಾಗಿದೆ. ಕೋಲ್ಕತ್ತಾದಲ್ಲಿ ಮೆಟ್ರೋ ಮತ್ತು ಹಲವು ರೈಲುಗಳ ಸಂಚಾರ ರದ್ದಾಗಿದೆ. ಪಶ್ಚಿಮ ಬಂಗಳಾದಲ್ಲಿ ಇಬ್ಬರು, ಬಾಂಗ್ಲಾದಲ್ಲಿ ಏಳು ಮಂದಿ ಬಲಿ ಆಗಿದ್ದಾರೆ.

ಇದೀಗ ಚಂಡಮಾರುತ ದುರ್ಬಲಗೊಂಡ ನಂತರ ಕೋಲ್ಕತ್ತಾದಲ್ಲಿ ವಿಮಾನಸೇವೆಗಳು ಪುನಾರಂಭಗೊಂಡಿವೆ. ಮಂಗಳವಾರ ಸಂಜೆಯವರೆಗೂ ಗಾಳಿ ಮಳೆಯ ಪರಿಸ್ಥಿತಿ ಇರಲಿದೆ. ಸದ್ಯ ಚಂಡಮಾರುತ ಅಸ್ಸಾಂ, ಮೇಘಾಲಯದತ್ತ ಚಲಿಸುತ್ತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!