ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದ್ಯಾರ್ಥಿನಿಯರ ಅರೆನಗ್ನ ವಿಡಿಯೋ ಚಿತ್ರೀಕರಣಕ್ಕಾಗಿ ಯುವಕನೊಬ್ಬ ಶೌಚಾಲಯದಲ್ಲಿ ಕ್ಯಾಮೆರಾ ಇಟ್ಟು ಸಿಕ್ಕಿಬಿದ್ದಿದ್ದಾನೆ. ಹೊಸಕೆರೆಹಳ್ಳಿ ಬಳಿಯ ಖಾಸಗಿ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಗಿರಿನಗರ ಪೊಲೀಸರು ಕ್ಯಾಮೆರಾ ಇಟ್ಟ ವಿದ್ಯಾರ್ಥಿಯನ್ನು ಅರೆಸ್ಟ್ ಮಾಡಿದ್ದಾರೆ.
ಬಿಬಿಐ ಐದನೇ ಸೆಮಿಸ್ಟರ್ ವಿದ್ಯಾರ್ಥಿ ಶುಭಂ ರಹಸ್ಯ ಕ್ಯಾಮೆರಾ ಫಿಕ್ಸ್ ಮಾಡಿದ್ದು, ಈಗಾಗಲೇ 1200ಕ್ಕೂ ಅಧಿಕ ವಿಡಿಯೋ ಹಾಗೂ ನಗ್ನ ಫೋಟೊಗಳನ್ನು ಚಿತ್ರೀಕರಿಸಿದ್ದಾನೆ.
ಕ್ಯಾಮೆರಾ ಅಳವಡಿಸಲು ಶೌಚಾಲಯಕ್ಕೆ ಶುಭಂ ಹೊರಟಿದ್ದು, ವಿದ್ಯಾರ್ಥಿನಿಯರು ಆತನನ್ನು ಕಂಡು ಕೂಗಿದ್ದಾರೆ. ಆಗ ಶುಭಂ ಪರಾರಿಯಾಗಿದ್ದಾನೆ. ಸಿಸಿಟಿವಿ ಪರಿಶೀಲಿಸಿದಾಗ ಶುಭಂ ಮಾಡಿದ ಕೃತ್ಯ ಬೆಳಕಿಗೆ ಬಂದಿದೆ.
ಈ ಹಿಂದೆಯೂ ಒಮ್ಮೆ ಇದೇ ರೀತಿ ಮಾಡಿ ಶುಭಂ ಸಿಕ್ಕಿಬಿದ್ದಿದ್ದ. ಇನ್ನೆಂದೂ ಹೀಗೆ ಮಾಡುವುದಿಲ್ಲ ಎಂದು ಕ್ಷಮಾಪಣಾ ಪತ್ರ ಬರೆದಿದ್ದ. ಕಾಲೇಜು ಆಡಳಿತ ಮಂಡಳಿ ಠಾಣೆಗೆ ದೂರು ನೀಡಿದ್ದು ಪೊಲೀಸರು ಆತನನ್ನು ಬಂಧಿಸಿ ಮೊಬೈಲ್ ಪರಿಶೀಲಿಸಿದ್ದಾರೆ. ಆತನ ಬಳಿ ಇನ್ನೊಂದು ಮೊಬೈಲ್ ಇದ್ದು ಅದರಲ್ಲಿಯೂ ವಿಡಿಯೋ ಇರುವ ಸಾಧ್ಯತೆ ಇದೆ.