ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದು ಸಣ್ಣ ಕೆಮ್ಮು ಬಂದರೂ ವೈದ್ಯರ ಭೇಟಿಗೆ ಹೋಗುವುದು ಉಚಿತವಲ್ಲ. ಮನೆಯಲ್ಲಿಯೇ ಇರುವ ವಸ್ತುಗಳು ವಿಶೇಷವಾದ ಔಷಧೀಯ ಗುಣ ಹೊಂದಿರುತ್ತವೆ. ಸಣ್ಣ ಪುಟ್ಟ ಅನೇಕ ಕಾಯಿಲೆಗಳಿಗೆ ಅವು ರಾಮಬಾಣವಾಗಿರುತ್ತವೆ. ಅಂತಹ ಅದ್ಭುತ ವಸ್ತುಗಳ ಔಷಧೀಯ ಗುಣಧರ್ಮಗಳ ಬಗ್ಗೆ ನಮಗೆ ತಿಳಿದಿರಬೇಕಷ್ಟೇ.
ಹೆಚ್ಚಿನ ಸಿಹಿ ಖಾದ್ಯಗಳಲ್ಲಿ, ಅಡುಗೆಗಳಲ್ಲಿ ಬಳಕೆಯಾಗುವ ಈ ವಸ್ತುಗಳು ಅದ್ಭುತ ಔಷಧೀಯ ಗುಣಧರ್ಮವನ್ನೊಳಗೊಂಡಿವೆ. ಹಾಗಾದ್ರೆ ಆ ವಸ್ತು ಯಾವುದು ಎಂಬ ಕುತೂಹಲವೇ…? ಹೌದು. ಒಣ ದ್ರಾಕ್ಷಿ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಅನೇಕ ಔಷಧೀಯ ಗುಣಗಳನ್ನು ತನ್ನೊಡಲಲ್ಲಿ ಹೊಂದಿದೆ.
ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಣದ್ರಾಕ್ಷಿಯ ನೀರು ಸೇವಿಸಿದರೆ ಹೊಟ್ಟೆಗೆ ಸಂಬಂಧಿಸಿದ ಅನೇಕ ಕಾಯಿಲೆಗಳು ದೂರವಾಗುತ್ತವೆ. ರಕ್ಷ ಶುದ್ಧಿಯಾಗುವುದಲ್ಲದೆ, ಹೃದಯ ಸಂಬಂಧಿ ಕಾಯಿಲೆಗಳು ದೂರವಾಗುತ್ತವೆ. ಹಿಮೋಗ್ಲೋಬಿನ್ ಹೆಚ್ಚಲು ಇದು ಸಹಕಾರಿ. ರಕ್ತದ ತೊಂದರೆ ಇರುವವರು ಇದನ್ನು ನಿತ್ಯ ಸೇವಿಸುವುದರಿಂದ ಈ ಸಮಸ್ಯೆ ದೂರವಾಗುತ್ತದೆ. ಜೀರ್ಣಶಕ್ತಿಯನ್ನು ಹೆಚ್ಚಿಸುವ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನೆನೆಸಿಟ್ಟ ಒಣ ದ್ರಾಕ್ಷಿ ಸೇವನೆಯಿಂದ ಬಾಯಿ, ಒಸಡು ಹಲ್ಲುಗಳ ಆರೋಗ್ಯ ಹೆಚ್ಚಾಗುತ್ತದೆ. ಉಸಿರಿನ ದುರ್ವಾಸನೆ ಹೋಗಲಾಡಿಸುತ್ತದೆ. ಒಣ ದ್ರಾಕ್ಷಿಯಲ್ಲಿ ಅಧಿಕ ಪ್ರಮಾಣದ ಕ್ಯಾಲ್ಸಿಯಂ ಹಾಗೂ ಪೋಷಕಾಂಶಗಳಿದ್ದು ಮೂಳೆಗಳ ಆರೋಗ್ಯ ವರ್ಧನೆಗೆ ಸಹಕಾರಿ. ಕೊಲೆಸ್ಟ್ರಾಲ್ ತೆಗೆದು ಹಾಕಲು ಇದು ಸಹಕಾರಿಯಾಗಿದೆ.