HEALTH | ಮಳೆಗಾಲದಲ್ಲಿ ಮೊಸರು ಸೇವಿಸಬಹುದಾ?

ಮೊಸರು ಸಾಮಾನ್ಯವಾಗಿ ಆರೋಗ್ಯಕ್ಕೆ ಒಳ್ಳೆಯದು ಎಂದು ಭಾವಿಸುತ್ತೇವೆ. ಆದರೂ ಸಹ, ಮಳೆಗಾಲದಲ್ಲಿ ನಾವು ಮೊಸರು ತಿನ್ನಬಾರದು ಎಂದು ಆಯುರ್ವೇದದಲ್ಲಿ ತಿಳಿಸಲಾಗಿದೆ.

ಈ ಮಳೆಗಾಲದ ಸಮಯದಲ್ಲಿ ಮೊಸರು ತಿನ್ನುವುದರಿಂದ ವಿವಿಧ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಮಳೆಗಾಲದಲ್ಲಿ ನಾವು ಮೊಸರು ಏಕೆ ತಿನ್ನಬಾರದು ಮತ್ತು ಅದನ್ನು ತಿಂದರೆ ಯಾವ ಸಮಸ್ಯೆಗಳು ಉಂಟಾಗಬಹುದು.

ಭೋಜನ ಅಥವಾ ಇತರ ರುಚಿಕರವಾದ ಆಹಾರಗಳೊಂದಿಗೆ ಒಂದು ಬಟ್ಟಲು ಮೊಸರನ್ನು ಸೇವಿಸುವುದು ಅನೇಕರ ನೆಚ್ಚಿನ ಅಭ್ಯಾಸ. ಆದಾರೂ ಕೂಡ ಮಳೆಗಾಲದಲ್ಲಿ ಮೊಸರು ತಿನ್ನುವುದು ಪಿತ್ತ, ವಾತ ಮತ್ತು ಕಫದಂತಹ ಮೂರು ವಿಷಯಗಳ ಮೇಲೆ ನೇರವಾಗಿ ಪರಿಣಾಮ ಬೀರುವ ಸಾಧ್ಯತೆ ಅಧಿಕವಾಗಿರುತ್ತದೆ.

ಆಯುರ್ವೇದ ತಜ್ಞರ ಪ್ರಕಾರ, ಇದು ಎಲ್ಲರಿಗೂ ಒಳ್ಳೆಯದಲ್ಲ. ಮಳೆಗಾಲದಲ್ಲಿ ವಾತ ಮತ್ತು ಪಿತ್ತ ಸಮಸ್ಯೆಗಳು ಹೆಚ್ಚಾಗಿ ಬಾಧಿಸುತ್ತವೆ. ಇದರಿಂದ ದೇಹವು ದುರ್ಬಲಗೊಳ್ಳಬಹುದು. ಇದರಿಂದ ಋತುಮಾನದ ಕಾಯಿಲೆಗಳು ಬರಲು ಕಾರಣವಾಗುತ್ತದೆ

 ಮೊಸರಿನಂತಹ ಶೀತವಾದ ಆಹಾರವನ್ನು ಸೇವಿಸುವುದು ಜೀರ್ಣಕಾರಿ ಶಕ್ತಿಯನ್ನು ದುರ್ಬಲಗೊಳಿಸಬಹುದು. ಇದು ಹೊಟ್ಟೆ ಉಬ್ಬರಿಕೆ, ಅಸಿಡಿಟಿ ಅಥವಾ ಪಿತ್ತ ಮತ್ತು ಅಜೀರ್ಣದಂತಹ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಕಾರಣಕ್ಕಾಗಿ ಮೊಸರಿಗೆ ಒಂದು ಚಿಟಿಕೆ ಕರಿಮೆಣಸು, ಹುರಿದ ಜೀರಿಗೆ ಅಥವಾ ಜೇನುತುಪ್ಪವನ್ನು ಸೇರಿಸಿ ಸೇವಿಸಬಹುದು.

ಮಳೆಗಾಲದಲ್ಲಿ ಮೊಸರಿನಂತಹ ಶೀತ ಆಹಾರವನ್ನು ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ತಣ್ಣನೆಯ ಆಹಾರಗಳ ಅತಿಯಾದ ಸೇವನೆಯು ದೇಹದಲ್ಲಿ ಲೋಳೆಯ ರಚನೆಯನ್ನು ಹೆಚ್ಚಿಸುತ್ತದೆ.

ಮಳೆಗಾಲದ ಸಮಯದಲ್ಲಿ ಹೆಚ್ಚು ಮೊಸರು ಸೇವಿಸುವುದರಿಂದ ದೇಹದಲ್ಲಿ ಲೋಳೆಯು ಹೆಚ್ಚಾಗುತ್ತದೆ. ಇದು ಎದೆಯಲ್ಲಿ ಅಥವಾ ಶ್ವಾಸಕೋಶದಲ್ಲಿ ಸಂಗ್ರಹವಾಗುತ್ತದೆ. ಇದರಿಂದ ಶೀತ ಮತ್ತು ಕೆಮ್ಮಿನಂತಹ ಉಸಿರಾಟದ ಸಮಸ್ಯೆಗಳು ಉಂಟಾಗಲು ಕಾರಣವಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!