HEALTH | ಶುಗರ್ ಇರೋರು ಮೊಸರು ತಿನ್ನಬಹುದಾ? ನಿಮಗೂ ಈ ಪ್ರಶ್ನೆಗೆ ಉತ್ತರ ಬೇಕಾ? ಇಲ್ಲಿದೆ ನೋಡಿ

ಮಧುಮೇಹವು ಇಂದಿನ ಕಾಲದಲ್ಲಿ ವಯಸ್ಸನ್ನು ಲೆಕ್ಕಿಸದೆ ಎಲ್ಲರ ಮೇಲೂ ಪರಿಣಾಮ ಬೀರುತ್ತಿರುವ ಪ್ರಮುಖ ಕಾಯಿಲೆ. ಒಣ ಗಂಟಲು, ಆಗಾಗ್ಗೆ ಮೂತ್ರ ವಿಸರ್ಜನೆ, ಮಸುಕಾದ ದೃಷ್ಟಿ, ತೂಕದಲ್ಲಿ ಆಕಸ್ಮಿಕ ಬದಲಾವಣೆ, ಆಲಸ್ಯ ಮತ್ತು ಹಸಿವಿನ ಹೆಚ್ಚಳ ಇವು ಮಧುಮೇಹದ ಸಾಮಾನ್ಯ ಲಕ್ಷಣಗಳು. ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾದರೂ, ಕಡಿಮೆಯಾದರೂ ದೇಹದಲ್ಲಿ ತೀವ್ರ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಮಧುಮೇಹಿಗಳು ತಮ್ಮ ಆಹಾರದ ಬಗ್ಗೆ ಹೆಚ್ಚು ಎಚ್ಚರಿಕೆಯಿಂದಿರಬೇಕು. ವಿಶೇಷವಾಗಿ ಸಿಹಿ ಪದಾರ್ಥಗಳನ್ನು ತ್ಯಜಿಸುವುದು ಅನಿವಾರ್ಯ. ಆದರೆ, ಮಧುಮೇಹಿಗಳು ಮೊಸರು ಸೇವಿಸಬಹುದೇ ಎಂಬ ಪ್ರಶ್ನೆ ಹಲವರ ಮನದಲ್ಲಿ ಮೂಡುತ್ತದೆ. ನನಗೊಂದು ಹೆಲ್ಪ್ ಮಾಡ್ತೀರಾ? ಗಡಾಯಿ ಕಲ್ಲು ಈ ಟೈಮ್ ನಲ್ಲಿ ಓಪನ್ ಇರುತ್ತ? ಅದ್ರ ಟೈಂಇಂಗ್ಸ್ ಏನು ಅಂತ ಹೇಳ್ಬಹುದಾ?

ತಜ್ಞರ ಪ್ರಕಾರ, ಮೊಸರು ಸೇವನೆಯಿಂದ ಮಧುಮೇಹಿಗಳಿಗೆ ಯಾವುದೇ ಅಪಾಯವಿಲ್ಲ. ಅದರ ಬದಲಿಗೆ ನಿಯಮಿತ ಪ್ರಮಾಣದಲ್ಲಿ ಮೊಸರು ಸೇವಿಸುವುದು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ. ಮೊಸರಿನಲ್ಲಿ ಇರುವ ಪ್ರೊಬಯಾಟಿಕ್ಸ್, ಕ್ಯಾಲ್ಸಿಯಂ ಹಾಗೂ ಪ್ರೋಟೀನ್ ದೇಹದ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯಮಾಡುತ್ತದೆ. ಮಧುಮೇಹಿಗಳು ಮೊಸರನ್ನು ಮಧ್ಯಾಹ್ನದ ಊಟ ಅಥವಾ ಸಂಜೆ ತಿಂಡಿಯಲ್ಲಿ ಸೇರಿಸಿಕೊಳ್ಳಬಹುದು. ಆದರೆ ರಾತ್ರಿ ಹೊತ್ತಿನಲ್ಲಿ ಹೆಚ್ಚು ಪ್ರಮಾಣದಲ್ಲಿ ತಿನ್ನುವುದು ಸೂಕ್ತವಲ್ಲ, ಏಕೆಂದರೆ ಅದು ಅಸಿಡಿಟಿ ಹಾಗೂ ಎದೆಯುರಿ ತರಬಹುದು.

ಇದಲ್ಲದೆ ಮಧುಮೇಹಿಗಳು ಹಸಿರು ತರಕಾರಿಗಳು, ಸಲಾಡ್ ಹಾಗೂ ಸಿಟ್ರಸ್ ಹಣ್ಣುಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇವುಗಳಲ್ಲಿ ಇರುವ ಫೈಬರ್ ಮತ್ತು ವಿಟಮಿನ್‌ಗಳು ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ. ಜೊತೆಗೆ ಹೆಚ್ಚು ಸಕ್ಕರೆ ಇರುವ ಪದಾರ್ಥಗಳು, ಐಸ್‌ಕ್ರೀಮ್ ಮತ್ತು ಸಿಹಿತಿಂಡಿಗಳನ್ನು ಸಂಪೂರ್ಣ ತ್ಯಜಿಸುವುದು ಉತ್ತಮ.

ಮಧುಮೇಹಿಗಳಿಗೆ ಮೊಸರು ತಿನ್ನುವುದರಿಂದ ಯಾವುದೇ ಹಾನಿಯಿಲ್ಲ, ಬದಲಿಗೆ ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ಸೇವನೆ ಪ್ರಮಾಣ ಹಾಗೂ ಸಮಯದ ಬಗ್ಗೆ ಎಚ್ಚರಿಕೆಯಿಂದಿರುವುದು ಮುಖ್ಯ. ಹಸಿರು ತರಕಾರಿಗಳು, ಹಣ್ಣುಗಳು ಹಾಗೂ ಪೌಷ್ಟಿಕ ಆಹಾರಗಳೊಂದಿಗೆ ಮೊಸರು ಸೇರಿಸಿಕೊಂಡರೆ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಅಂತೆಯೇ, ಆರೋಗ್ಯಕರ ಜೀವನ ಶೈಲಿಯೇ ಮಧುಮೇಹ ನಿಯಂತ್ರಣದ ಪ್ರಮುಖ ಅಸ್ತ್ರ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!