ಕಸ ಎಸೆದು ಎಸ್ಕೇಪ್‌ ಆಗ್ತೀರಾ? ಮನೆ ಹುಡುಕಿಕೊಂಡು ಬಂದು ದಂಡ ಹಾಕ್ತಾರೆ ಬಿಬಿಎಂಪಿ ಸಿಬ್ಬಂದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಳಗಿನ ಜಾವ, ರಾತ್ರಿ ಸಮಯ ನೋಡಿಕೊಂಡು ಕಡಿಮೆ ಜನ ಇದ್ದಾಗ ಎಲ್ಲೆಂದರಲ್ಲಿ ಕಸ ಎಸೆದು ಬರ್ತೀರಾ? ಇನ್ಮುಂದೆ ಈ ರೀತಿ ಮಾಡಿದ್ರೆ ಬಿಬಿಎಂಪಿ ಸಿಬ್ಬಂದಿ ಮನೆ ಬಳಿಯೇ ಬಂದು ಫೈನ್‌ ಕಲೆಕ್ಟ್‌ ಮಾಡ್ತಾರೆ!

ಹೊಸಕೆರೆಹಳ್ಳಿಯಲ್ಲಿ ಸರವಣ ಎಂಬವರು ರಸ್ತೆ ಬದಿ ಕಸ ಎಸೆದು ಹೋಗಿದ್ದರು. ಕಸ ಎಸೆದು ಹೋಗುತ್ತಿರುವ ದೃಶ್ಯ ಸಮಿಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಈ ದೃಶ್ಯದ ಆಧಾರದ ಮೇಲೆ ಬಿಬಿಎಂಪಿ ಹೆಲ್ತ್‌ ಸೂಪರ್‌ವೈಸರ್‌ ಲೋಕೇಶ್‌ ಅವರು ಸರವಣ ಮನೆಗೆ ತೆರಳಿ 100 ರೂ. ದಂಡ ವಿಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!