ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದ ಸಿದ್ದಿಪೇಟೆಯಲ್ಲಿ ಚೆನ್ನಾಗಿರುವ ಹುಡುಗಿಯನ್ನು ಹುಡುಕಲು ವಿಫಲವಾದ ತಾಯಿಯನ್ನು ಮಗನೇ ಕೊಂದಿದ್ದಾನೆ.
ಹೌದು, 45 ವರ್ಷದ ಮಹಿಳೆ ತಮ್ಮ ಮಗನಿಗಾಗಿ ವಧು ಹುಡುಕುತ್ತಿದ್ದರು. ಆದರೆ ಹುಡುಗಿಯರು ಮಗನಿಗೆ ಇಷ್ಟವಾಗಿರಲಿಲ್ಲ. ಇದೇ ಕಾರಣಕ್ಕೆ ಸಣ್ಣ ಪುಟ್ಟ ಗಲಾಟೆ ನಡೆಯುತ್ತಿಲೇ ಇತ್ತು. ಜಗಳ ತಾರಕಕ್ಕೇರಿ ಸರಿಯಾದ ಒಂದು ಹುಡುಗಿ ಹುಡುಕೋಕೆ ಆಗೋದಿಲ್ವಾ ಎಂದು ಮಗ ಸಿಟ್ಟಿನಲ್ಲಿ ಇಟಿಕೆಯಿಂದ ತಲೆಗೆ ಹೊಡೆದಿದ್ದಾನೆ. ನಂತರ ಬೇರೆ ಯಾರೋ ಕೊಲೆ ಮಾಡಿದ್ದಾರೆ ಎಂದು ಬಿಂಬಿಸಲು ಕುತ್ತಿಗೆ ಕುಯ್ದು ಕಾಲುಗಳನ್ನು ಕತ್ತರಿಸಿ ಎಸೆದಿದ್ದಾನೆ.
ಮಹಿಳೆಯ ಮಗಳು ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಮಗನನ್ನು ಬಂಧಿಸಿದ್ದಾರೆ. ಠಾಣೆಯಲ್ಲಿ ಆತ ತಾಯಿಯನ್ನು ಕೊಂದಿರುವ ವಿಚಾರವನ್ನು ಒಪ್ಪಿಕೊಂಡಿದ್ದಾನೆ,