ಬಾತ್‌ರೂಂಗೆ ಹೋಗೋ ಅರ್ಜೆಂಟ್ ಇದ್ರೂ ಫೋನ್ ಎಲ್ಲಿ ಅಂತ ಹುಡುಕಾಡೋದು, ಕೆಲವರಿಗಂತೂ ಫೋನ್ ಇಲ್ಲದೆ ಟಾಯ್ಲೆಟ್ ಕೂಡ ಬರೋದಿಲ್ಲ. ಬಾತ್‌ರೂಂನಲ್ಲಿ ಕುಳಿತು ನ್ಯೂಸ್ ಓದೋದು, ಶಾಪಿಂಗ್ ಮಾಡೋದು, ರೀಲ್ಸ್ ನೋಡೋದು ಇವು ನೆಚ್ಚಿನ ಸಂಗತಿಗಳಾಗಿವೆ. ಕೆಲವರಂತೂ ಫೋನ್ ತೆಗೆದುಕೊಂಡ ಬಾತ್‌ರೂಂಗೆ ಹೋದ ಗಂಡಸರು ಬರೋಕೆ ಗಂಟೆಯೇ ಬೇಕು ಎಂದು ಟ್ರೋಲ್ ಮಾಡಿದ್ದಾರೆ.
ಕೆಲವರಿಗೆ ಇದು ಅನಿವಾರ್ಯವೂ ಆಗಿರಬಹುದು, ಯಾವುದೋ ಮೀಟಿಂಗ್ ಅಥವಾ ಕರೆಯ ಮಧ್ಯೆ ಬಾತ್‌ರೂಂಗೆ ಹೋಗಬೇಕಾದಾಗ, ಯಾವುದೋ ಮುಖ್ಯ ವಿಷಯವಾಗಿ ಚಾಟ್ ಮಾಡುವ ಮಧ್ಯೆ ಬಾತ್‌ರೂಂ ಹೋಗಬೇಕಾದರೆ ಮೊಬೈಲ್ ತೆಗೆದುಕೊಂಡು ಹೋಗಲೇಬೇಕಾದ ಅನಿವಾರ್ಯ ಅವರದ್ದು.
ಆದರೆ ಬಾತ್‌ರೂಂಗೆ ಫೋನ್ ತೆಗೆದುಕೊಂಡು ಹೋದ್ರೆ ಏನಾಗುತ್ತದೆ?
ಟಾಯ್ಲೆಟ್ ಫ್ಲಶ್ ಮಾಡುವ ವೇಳೆ ಸಾಕಷ್ಟು ವಿಧವಿಧದ ಬ್ಯಾಕ್ಟೀರಿಯಾಗಳು ನಿಮ್ಮ ಫೋನ್ ಮೇಲೆ ಕೂರುತ್ತವೆ. ಈ ಬ್ಯಾಕ್ಟೀರಿಯಾಗಳು ನಿಮ್ಮ ಆರೋಗ್ಯ ಹಾಳುಮಾಡುವಷ್ಟು ಶಕ್ತಿಶಾಲಿ ಆಗಿರುತ್ತದೆ.
ಟಾಯ್ಲೆಟ್ ರೂಂ ಎಂದರೆ ಗಲೀಜು ಎಂದು ಎಷ್ಟು ಜನಕ್ಕೆ ಅನಿಸುತ್ತದೆ? ವಾರಕ್ಕೊಮ್ಮೆ ಕ್ಲೀನ್ ಮಾಡಿದರೂ ಬ್ಯಾಕ್ಟೀರಿಯಾಗಳನ್ನು ತಪ್ಪಿಸೋಕೆ ಆಗೋದಿಲ್ಲ. ಗನ್ ಮೇಲೆ, ಟಾಯ್ಲೆಟ್ ಸೀಟ್ ಮೇಲೆ, ಬಜೆಕ್, ಚೊಂಬಿನ ಮೇಲೆ ಅಷ್ಟೇ ಯಾಕೆ ಬಾತ್‌ರೂಂ ಬಾಗಿಲ ಮೇಲೆಯೂ ಬ್ಯಾಕ್ಟೀರಿಯಾ ಇರುತ್ತದೆ. ಇದು ನಿಮಗೆ ಬೇಧಿ, ಹೊಟ್ಟೆನೋವು, ಯುರಿನರಿ ಇನ್ಫೆಕ್ಷನ್ ನೀಡುತ್ತದೆ.