ಕೆನಡಾ ನಿಮ್ಮ ಆಟದ ಮೈದಾನವಲ್ಲ, ಇಲ್ಲಿ ಹಿಂದುತ್ವ ಪ್ರಚಾರ ಮಾಡಬೇಡಿ: ಕಪಿಲ್‌ ಶರ್ಮಾಗೆ ಬೆದರಿಕೆ ಹಾಕಿದ ಪನ್ನು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿರುವ ಹಾಸ್ಯನಟ ಕಪಿಲ್ ಶರ್ಮಾ ಅವರ ಕೆಫೆಯ ಮೇಲೆ ಇತ್ತೀಚೆಗೆ ದಾಳಿ ನಡೆದಿದ್ದು, ಇದೀಗ ಖಲಿಸ್ತಾನಿ ಪರ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಕಪಿಲ್‌ ಶರ್ಮಾ ಅವರಿಗೆ ಬೆದರಿಕೆ ಹಾಕಿದ್ದಾನೆ.

ಕೆನಡಾದಲ್ಲಿ ವ್ಯವಹಾರ ಮಾಡುವ ನೆಪದಲ್ಲಿ ಕಪಿಲ್ ಶರ್ಮಾ ಹಿಂದುತ್ವವನ್ನು ಉತ್ತೇಜಿಸುತ್ತಿದ್ದಾರೆ ಎಂದು ವೀಡಿಯೊ ಸಂದೇಶದಲ್ಲಿ ಆರೋಪಿಸಿದ್ದಾರೆ ಮತ್ತು ದೇಶವು ತನ್ನ ನೆಲದಲ್ಲಿ ಅಂತಹ ಆಲೋಚನೆಗಳು ರೂಪುಗೊಳ್ಳಲು ಬಿಡುವುದಿಲ್ಲ ಎಂದು ಪನ್ನು ಹೇಳಿದ್ದಾನೆ.

ಕೆನಡಾ ನಿಮ್ಮ ಆಟದ ಮೈದಾನವಲ್ಲ. ನಿಮ್ಮ ರಕ್ತದ ಹಣವನ್ನು ಹಿಂದೂಸ್ತಾನಕ್ಕೆ ಹಿಂತಿರುಗಿಸಿ. ಕೆನಡಾದ ನೆಲದಲ್ಲಿ ವ್ಯಾಪಾರದ ನೆಪದಲ್ಲಿ ಹಿಂಸಾತ್ಮಕ ಹಿಂದುತ್ವ ಸಿದ್ಧಾಂತ ಬೇರೂರಲು ಕೆನಡಾ ಬಿಡುವುದಿಲ್ಲ ಎಂದು ವಿಡಿಯೋ ಒಂದನ್ನು ಬಿಡುಗಡೆ ಮಾಡಲಾಗಿದೆ.

ಕ್ಯಾಪ್ಸ್ ಕೆಫೆ ‘ಕೇವಲ ಹಾಸ್ಯ ಸ್ಥಳವೇ ಅಥವಾ ಹಿಂದುತ್ವವನ್ನು ರಫ್ತು ಮಾಡುವ ದೊಡ್ಡ ಪಿತೂರಿಯ ಭಾಗವೇ’ ಎಂದು ಪನ್ನುನ್ ಪ್ರಶ್ನಿಸಿದ್ದಾನೆ.

ಇತ್ತ ಭಾರತದಿಂದ ಭಯೋತ್ಪಾದಕ ಎಂದು ಹೆಸರಿಸಲ್ಪಟ್ಟ ಬಿಕೆಐ ಕಾರ್ಯಕರ್ತ ಹರ್ಜಿತ್ ಸಿಂಗ್ ಲಡ್ಡಿ ವೀಡಿಯೊ ಸಂದೇಶದಲ್ಲಿ ಕಪಿಲ್ ಶರ್ಮಾ ಅವರ ಕೆಫೆಯ ಮೇಲಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ. ಲಡ್ಡಿ ಭಾರತದ ಮೋಸ್ಟ್ ವಾಟೆಂಟ್ ಉಗ್ರನಾಗಿದ್ದಾನೆ. ಭಾರತದಲ್ಲಿ ಹಲವು ಭಯೋತ್ಪಾದಕ ಕೃತ್ಯಗಳು, ಹಿಂದು ನಾಯಕ ಹತ್ಯೆ ಹಿಂದೆ ಈತನ ಮೇಲೆ ಗಂಭೀರ ಆರೋಪಗಳು ಕೇಳಿಬಂದಿದೆ.

ದಾಳಿ ಬಳಿಕ ಕುರಿತು ಮೊದಲ ಬಾರಿಗೆ ಮಾತನಾಡಿದ ಕಪಿಲ್‌, ರುಚಿಕರವಾದ ಕಾಫಿ ಮತ್ತು ಸ್ನೇಹಪರ ಸಂಭಾಷಣೆಗಳ ಮೂಲಕ ಜನರಿಗೆ ಸಂತೋಷವನ್ನು ತರುವ ಭರವಸೆಯೊಂದಿಗೆ ನಾವು ಕ್ಯಾಪ್ಸ್ ಕೆಫೆಯನ್ನು ತೆರೆದಿದ್ದೇವೆ. ಆ ಕನಸಿಗೆ ಪೆಟ್ಟು ಬಿದ್ದರೆ ನಾವು ಅದನ್ನು ಸಹಿಸುವುದಿಲ್ಲ. ನಾವು ಮತ್ತೆ ಎದ್ದು ನಿಲ್ಲುತ್ತೇವೆ. ಅದೇ ಜಗದಲ್ಲಿ ಮರಳಿ ಕೆಫೆ ಪ್ರಾರಂಭಿಸುತ್ತೇವೆ. ಯಾವುದಕ್ಕೂ ಭಯ ಪಡುವುದಿಲ್ಲ ಎಂದು ಹೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!