ಹೆಚ್ಚಿತು ಬಿಸಿಲಿನ ತಾಪಮಾನ: ಕಾಡ್ಗಿಚ್ಚಿಗೆ ಅರಣ್ಯ ಪ್ರದೇಶ ಸುಟ್ಟು ಭಸ್ಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಕೆನಡಾದ ಅರಣ್ಯ ಪ್ರದೇಶಗಳು ಬೆಂಕಿಗಾಹುತಿಯಾಗಿವೆ. ಈಗಾಗಲೇ, ಕೆನಡಾದಲ್ಲಿ 17,800 ಚದರ ಮೈಲುಗಳಷ್ಟು ಅರಣ್ಯ ಭೂಮಿ ಸುಟ್ಟುಹೋಗಿವೆ. ಹವಾಮಾನ ವೈಪರೀತ್ಯದ ಬಿಸಿ ಹೆಚ್ಚುತ್ತಿರುವಂತೆಯೇ ಕಾಡ್ಗಿಚ್ಚು ಉರಿಯುತ್ತಿದೆ. ಕೆನಡಾದ ಹಲವು ಭಾಗಗಳಲ್ಲಿ ಕಾಡ್ಗಿಚ್ಚಿನ ಕಾರಣ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಕೆನಡಾದ ಅಧಿಕಾರಿಗಳು ತಿಳಿಸಿದ್ದಾರೆ.

ಕೆನಡಾದ ಪಶ್ಚಿಮ ಭಾಗಗಳು ಕಾಡ್ಗಿಚ್ಚಿಗೆ ಪ್ರಭಾವಿತವಾಗಿವೆ. ಹಲವಾರು ದಿನಗಳ ನಂತರ, ಆಲ್ಬರ್ಟಾದಲ್ಲಿ ಬೆಂಕಿ ತೀವ್ರಗೊಂಡಿದೆ. ಎಡ್ಸನ್ ಪಟ್ಟಣ ವಾಸಿಗಳನ್ನು ಸ್ಥಳಾಂತರಿಸಲಾಗುತ್ತಿದೆ. ಕ್ವಿಬೆಕ್ ಸಾರ್ವಜನಿಕ ಭದ್ರತಾ ಸಚಿವ ಫ್ರಾಂಕೋಯಿಸ್ ಬೊನ್ನಾರ್ಡೆಲ್, ಪ್ರಾಂತ್ಯದ ಮಧ್ಯ ಮತ್ತು ವಾಯುವ್ಯ ಭಾಗಗಳಲ್ಲಿ ಪರಿಸ್ಥಿತಿ ಕಷ್ಟಕರವಾಗಿದ್ದು, ಪಟ್ಟಣಗಳಿಗೆ ಬೆಂಕಿಯ ಭೀತಿ ಎದುರಾಗಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!