ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ಸರ್ಕಾರ ಈಗಾಗಲೇ ಜಾತಿ ಗಣತಿಯನ್ನು (Caste Survey ) ಮಾಡಿದೆ. ಈ ಸಮೀಕ್ಷೆಗೆ ಅವಕಾಶ ನೀಡಬಾರದು ಎಂದು ಹೈಕೋರ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಹೈಕೋರ್ಟ್ ಇದಕ್ಕೆ ವಿಸ್ತೃತ ವಿಚಾರಣೆ ಅಗತ್ಯ ಇದೆ ಎಂದು ಹೇಳಿತ್ತು. ನಂತರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಹಾಕಿದ್ದು, ಇದೀಗ ಈ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ, ಜನವರಿಗೆ ಮುಂದೂಡಿದೆ.
ಜೊತೆಗೆ ಜಾತಿ ಸಮೀಕ್ಷೆಯ ಬಗ್ಗೆ ತಡೆ ನೀಡುವ ಆದೇಶವನ್ನು ನ್ಯಾಯಾಲಯವು ನಿರಾಕರಿಸಿದೆ. ರಾಜ್ಯ ಸರ್ಕಾರವು ಯಾವುದೇ ನೀತಿ, ನಿರ್ಧಾರ ತೆಗೆದುಕೊಳ್ಳುವುದನ್ನು ನಾವು ತಡೆಯಲಾಗದು ಎಂದು ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿ ಸಂಜೀವ್ ಖನ್ನಾ ಪೀಠವು,ವಿಚಾರಣೆಯಲ್ಲಿ ಪರಿಶೀಲಿಸಬಹುದೇ ಹೊರತು, ಅದನ್ನು ತಡೆಯುವ ಹಕ್ಕು ನಮಗಿಲ್ಲ ಎಂದು ಹೇಳಿದೆ. ಇನ್ನು ಹೈಕೋರ್ಟ್ ವಿಸ್ತೃತ ಆದೇಶ ನೀಡಿದ್ದು, ನಾವು ಕೂಡ ವಿಸ್ತೃತ ವಿಚಾರಣೆ ನಡೆಸಬೇಕಿದೆ ಎಂದು ಹೇಳಿದೆ.
ಇದರ ವಿಚಾರಣೆಯನ್ನು ಮುಂದಿನ 2024ರ ಜನವರಿಯಲ್ಲಿ ಪಟ್ಟಿ ಮಾಡಿದೆ.