ಬೇಸಿಗೆ ಅಂದಮೇಲೆ ಮನೆಯಲ್ಲಿ ಫ್ಯಾನ್ ಸದಾ ಓಡುತ್ತಿರುತ್ತದೆ. ಕರೆಂಟ್ ಬಿಲ್ ಕೂಡ ಹೆಚ್ಚಿಗೆ ಬರುತ್ತದೆ. ಆದರೆ ಈ ಫ್ಯಾನ್‌ನಿಂದ ನಿಮ್ಮ ಸೆಖೆ ಕಡಿಮೆಯಾಗೋದಿಲ್ಲ. ಇನ್ನೂ ಹೆಚ್ಚಾಗುತ್ತದೆ. ಹೌದು, ಇನ್ನೇನು ಸಮಸ್ಯೆಯಿದೆ? ನೋಡೋಣ ಬನ್ನಿ..
ನೀವು ಜೋರಾಗಿ ಫ್ಯಾನ್ ಹಾಕಿಕೊಂಡು ಕೂತರೆ ಹೀಟ್ ಗಾಳಿ ಅಲ್ಲಲ್ಲೇ ಸುತ್ತುತ್ತದೆ. ನಿಮ್ಮ ದೇಹಕ್ಕೆ ಸಹಿಸಲಾಗದಷ್ಟು ಸೆಖೆಯಾಗುತ್ತದೆ.
ಬಿಸಿಲಿನಲ್ಲಿ ಫ್ಯಾನ್ ಹಾಕಿಕೊಂಡು ಕೂತರೆ ಅಥವಾ ಮಲಗಿದರೆ ನೀವು ಡೀಹೈಡ್ರೇಟ್ ಆಗುತ್ತೀರಿ. ದೇಹದಿಂದ ನೀರು ಹೊರಹೋಗುತ್ತದೆ.
ಫ್ಯಾನ್‌ನ ಗಾಳಿಯಿಂದ ತಲೆನೋವು, ಬಾಯಿ ಒಣಗುವುದು, ಗಂಟಲು ಒಣಗುವುದು, ಮೂಗು ಕಟ್ಟುವುದು ಹಾಗೂ ಕಣ್ಣುರಿ ಆಗುತ್ತದೆ.
ಫ್ಯಾನ್‌ನಲ್ಲಿ ಧೂಳು ಇದ್ದರೆ ಅಥವಾ ಮನೆಯಲ್ಲಿ ಸಾಕುಪ್ರಾಣಿಗಳಿದ್ದರೆ, ಅದರ ಕೂದಲು ಹೋಗಿ ಫ್ಯಾನ್ ಮೇಲೆ ಕೂತಿರುತ್ತದೆ. ಇದು ಅಸ್ತಮಾಗೆ ಕಾರಣವಾಗುತ್ತದೆ.



