September 21, 2026
Monday, September 21, 2026
spot_img

VIRAL | ಗಂಗಾ ನದಿಗೆ ಹಾಲಾಯ್ತು, ಇದೀಗ 165 ಲೀಟರ್ ತುಪ್ಪ ಅರ್ಪಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇತ್ತೀಚೆಗಷ್ಟೇ ಗಂಗಾ ನದಿಗೆ 11,000 ಲೀಟರ್ ಹಾಲು ಸುರಿದ ಘಟನೆ ಸುದ್ದಿಯಾಗಿತ್ತು. ಇದೀಗ ಗಂಗಾ ನದಿಗೆ ಬರೋಬ್ಬರಿ 165 ಲೀಟರ್ ತುಪ್ಪವನ್ನು ಸುರಿದಿರುವ ವಿಡಿಯೋ ವೈರಲ್‌ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.

ದೇಸಿ ತುಪ್ಪ ಎಷ್ಟೊಂದು ಬಡವರ ಹೊಟ್ಟೆಗೆ ಸೇರಬಹುದಿತ್ತು. ಅದೇ ತುಪ್ಪದ ಹಣದಲ್ಲಿ ಊಟವಿಲ್ಲದವರಿಗೆ ಊಟ ನೀಡಬಹುದಿತ್ತು. ಆಗಲೂ ದೇವರು ಮೆಚ್ಚುತ್ತಿದ್ದ. ಅದನ್ನು ಬಿಟ್ಟು ಹೀಗೆ ತುಪ್ಪವನ್ನು ನದಿಗೆ ಚಲ್ಲಿದ್ದು ಸರಿಯಲ್ಲ ಎನ್ನುತ್ತಿದ್ದಾರೆ.

ಇಷ್ಟೇ ಅಲ್ಲದೆ ತುಪ್ಪ ನೀರಿನ ಮೇಲೆ ತೇಲುತ್ತದೆ. ಇದರಿಂದಾಗಿ ಸಮುದ್ರಜೀವಿಗಳಿಗೆ ಅಪಾಯವಗುತ್ತದೆ. ಅವುಗಳಿಗೆ ಸಾವು ಕೂಡ ಬರುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲೇನಿದೆ?
ನದಿಯ ದಡದಲ್ಲಿ ಇಬ್ಬರು ನಿಂತಿರುತ್ತಾರೆ. ತುಪ್ಪ ತುಂಬಿದ ಪಾತ್ರೆಯನ್ನು ಹಿಡಿದು ನಿಧಾನವಾಗಿ ನದಿಗೆ ಸುರಿಯುತ್ತಿದ್ದಾರೆ. ಇದಾದ ನಂತರ ಅಲ್ಲಿ ನಿಂತಿದ್ದ ಕೆಲವು ಜನರು ತುಪ್ಪ ತುಂಬಿಸಿಕೊಂಡು ದೋಣಿಯ ಮೂಲಕ ನದಿಯ ಮಧ್ಯಭಾಗಕ್ಕೆ ಹೋಗುತ್ತಾರೆ. ಅಲ್ಲಿ ಒಬ್ಬೊಬ್ಬರಾಗಿ ಸಾಲಾಗಿ ನಿಂತು ಪಾತ್ರೆಯಲ್ಲಿದ್ದ ತುಪ್ಪವನ್ನು ಸುರಿಯುತ್ತಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !