ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶವನ್ನು ಲೂಟಿ ಮಾಡಿ ಹಾಳು ಮಾಡಿದ ಕಾಂಗ್ರೆಸಿಗರು ನೆಮ್ಮದಿಯಿಂದ ವಿಶ್ರಮಿಸಬಾರದು. ನಾನು ಇರುವ ತನಕ ಖಂಡಿತ ಕಾಂಗ್ರೆಸ್‌ಗೆ ನೆಮ್ಮದಿ ಕೊಡುವುದಿಲ್ಲ ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಹಿಂದೂ ವಿರೋಧಿ, ಅಭಿವೃದ್ಧಿ ವಿರೋಧಿ, ದೇಶ ವಿರೋಧಿ, ದಲಿತ, ಮಹಿಳಾ ವಿರೋಧಿಯಾಗಿದ್ದು, ನಮ್ಮ ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವದಲ್ಲಿರಬಾರದು.
ನಮಗೆ ವಿರೋಧ ಪಕ್ಷ ಬೇಕು. ಆದರೆ ಉತ್ತಮ ವಿರೋಧ ಪಕ್ಷವಿರಬೇಕು. ಕಾಂಗ್ರೆಸ್ ಜೊತೆಗೆ ಮತ್ತೊಂದು ರಚನಾತ್ಮಕ ವಿರೋಧ ಪಕ್ಷ ಗೆಲ್ಲಲಿ. ಪ್ರಜಾಪ್ರಭುತ್ವ ದೇಶವು ಉತ್ತಮ ವಿರೋಧ ಪಕ್ಷವನ್ನು ಹೊಂದಿರಬೇಕು. ಆದರೆ ಇಂತಹ ಮನೆಮುರುಕ ಕಾಂಗ್ರೆಸ್ ಇರಬಾರದು. ದೇಶದಲ್ಲಿ ಕಾಂಗ್ರೆಸ್ ಸೃಷ್ಟಿಸಿರುವ ಅಶಾಂತಿಯನ್ನು ನೋಡಿ ಯಾರಿಗೂ ನಿದ್ದೆ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.