ನೀವು ಕಾಫಿ ಪ್ರಿಯರಾ? ಬೆಳಗ್ಗೆ ನೀರು ಕುಡಿದ ನಂತರ ಒಂದು ಲೋಟ ಕಾಫಿ ಬೇಕೇ ಬೇಕಾ? ಹಾಗಿದ್ರೆ ಮಿಸ್ ಮಾಡದೇ ಇದನ್ನು ಓದಿ..
ಈಗಾಗಲೇ ನೀವು ಬೆಳಗ್ಗೆ ಖಾಲಿ ಹೊಟ್ಟೆಗೆ ಕಾಫಿ ಕುಡಿಯೋದು ತುಂಬಾ ಕೆಟ್ಟದ್ದು ಎಂದು ಓದಿರಬಹುದು, ಆದರೆ ಕಾಫಿ ಎಲ್ಲರಿಗೂ ಸೆಟ್ ಆಗೋದಿಲ್ಲ. ಎಷ್ಟೋ ಮಂದಿಗೆ ಬೆಳಗ್ಗೆ ಎದ್ದ ತಕ್ಷಣ ಕಾಫಿ ಕುಡಿದಿಲ್ಲ ಎಂದರೆ ಎನರ್ಜಿ ಇರೋದಿಲ್ಲ. ಖಾಲಿ ಹೊಟ್ಟೆಗೆ ಕಾಫಿ ಬಿದ್ದರೂ ಅವರಿಗೆ ಯಾವ ತೊಂದರೆಯೂ ಆಗೋದಿಲ್ಲ. ಏಕೆಂದರೆ ಕೆಫಿನ್ ಒಬ್ಬೊಬ್ಬರಿಗೆ ಒಂದೊಂದು ರೀತಿ ಕೆಲಸ ಮಾಡುತ್ತದೆ.
ಕೆಲವರಿಗೆ ಕಾಫಿ ಕುಡಿದು ಅಭ್ಯಾಸವೇ ಇರೋದಿಲ್ಲ. ಅಂತವರು ಕಾಫಿಕುಡಿದು ಹೊಟ್ಟೆನೋವು, ಹೊಟ್ಟೆ ಉಬ್ಬರ, ನೋವು, ಆಸಿಡ್ ರಿಫ್ಲಕ್ಸ್ ಸಮಸ್ಯೆ ಅನುಭವಿಸುತ್ತಾರೆ. ಹಾಗಾಗಿ ನಿಮ್ಮ ದೇಹ ಏನು ಹೇಳುತ್ತದೋ ಅದನ್ನು ಮಾಡಿ..