ಶತಕದ ಭರದಲ್ಲಿ ರೂಲ್ಸ್ ಬ್ರೇಕ್ ಮಾಡಿದ ಕ್ಯಾಪ್ಟನ್‌ ಗಿಲ್! ಐಸಿಸಿ ಕೊಡುತ್ತಾ ಎಚ್ಚರಿಕೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಲೀಡ್ಸ್‌ನಲ್ಲಿನ ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸಿ ಮೆರೆದ ಭಾರತದ ನಾಯಕ ಶುಭ್‌ಮನ್ ಗಿಲ್ ಈಗ ಐಸಿಸಿ ನಿಯಮ ಉಲ್ಲಂಘಿಸಿದ ಆರೋಪದ ನಡುವಲ್ಲಿ ಸಿಕ್ಕಿಕೊಂಡಿದ್ದಾರೆ. ಭಾರತ ತಂಡ ಮೊದಲಾಗಿ ಬ್ಯಾಟಿಂಗ್ ಮಾಡಿ 113 ಓವರ್‌ಗಳಲ್ಲಿ 471 ರನ್‌ಗಳನ್ನು ಕಲೆಹಾಕಿದ ಪೈಕಿ, ಗಿಲ್ 227 ಎಸೆತಗಳಲ್ಲಿ 147 ರನ್ ಗಳಿಸಿ ಶತಕದ ಮೂಲಕ ಗಮನ ಸೆಳೆದರು.

ಆಟದ ವೇಳೆ ಗಿಲ್ ಧರಿಸಿದ್ದ ಕಪ್ಪು ಬಣ್ಣದ ಸಾಕ್ಸ್‌ಗಳು ಹೊಸ ವಿವಾದಕ್ಕೆ ದಾರಿ ಮಾಡಿವೆ. ಟೆಸ್ಟ್ ಕ್ರಿಕೆಟ್‌ನ ಉಡುಪು ಸಂಹಿತೆಯ ಪ್ರಕಾರ, ಆಟಗಾರರು ಬಿಳಿ, ಕ್ರೀಮ್ ಅಥವಾ ತಿಳಿ ಬೂದು ಬಣ್ಣದ ಸಾಕ್ಸ್‌ಗಳನ್ನು ಮಾತ್ರ ಧರಿಸಬೇಕು. ಗಿಲ್ ಧರಿಸಿದ ಕಪ್ಪು ಸಾಕ್ಸ್‌ಗಳು ಐಸಿಸಿಯ ಉಡುಪು ಮತ್ತು ಸಲಕರಣೆಗಳ ಸಂಹಿತೆಯ ಸೆಕ್ಷನ್ 4ರ ಉಲ್ಲಂಘನೆಯಾಗುತ್ತವೆ.

ಈ ನಿಯಮ ಉಲ್ಲಂಘನೆಗಾಗಿ, ಗಿಲ್‌ಗೆ ಐಸಿಸಿ ಎಚ್ಚರಿಕೆ ನೀಡುವ ಸಾಧ್ಯತೆ ಇದೆ. ಆದರೆ ಮುಂದಿನ 12 ತಿಂಗಳಲ್ಲಿ ಮತ್ತಷ್ಟು ಉಲ್ಲಂಘನೆಗಳು ನಡೆದರೆ, ಪಂದ್ಯ ಶುಲ್ಕದ 75% ರವರೆಗೆ ದಂಡ ವಿಧಿಸಬಹುದಾಗಿದೆ. ಮುಂದಿನ ಕ್ರಮವನ್ನು ಪಂದ್ಯ ಅಧೀಕ್ಷಕರು ನಿರ್ಧರಿಸಲಿದ್ದಾರೆ.

ಶತಕದ ಮೂಲಕ ನಾಯಕತ್ವಕ್ಕೆ ಶಕ್ತಿಯನ್ನು ತಂದುಕೊಟ್ಟ ಗಿಲ್ ಇದೀಗ ನಿಯಮ ಉಲ್ಲಂಘನೆಯ ನಿರ್ವಹಣೆಯಲ್ಲಿ ಹೇಗೆ ವರ್ತಿಸುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!