ವಾಕಿಂಗ್ ನಿರತ ಮಹಿಳೆಯರಿಗೆ ಜವರಾಯನಾಗಿ ಕಾಡಿದ ಕಾರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಂಗಾರೆಡ್ಡಿ ಜಿಲ್ಲೆಯ ಬಂಡ್ಲಗುಡದಲ್ಲಿ ಮಂಗಳವಾರ ಬೆಳಗ್ಗೆ ದುರಂತವೊಂದು ನಡೆದಿದೆ. ವೇಗವಾಗಿ ಬಂದ ಹೋಂಡಾ ಸ್ಪೋರ್ಟ್ಸ್ ಕಾರು ವಾಕಿಂಗ್‌ ಮಾಡುತ್ತಿದ್ದ ಮಹಿಳೆಯರಿಗೆ ಡಿಕ್ಕಿ ಹೊಡೆದಿದೆ.

ಈ ಅಪಘಾತದಲ್ಲಿ ಇಬ್ಬರು ಮಹಿಳೆಯರು ಮತ್ತು ಒಂದು ಮಗು ಸಾವನ್ನಪ್ಪಿದ್ದು, ಘಟನೆಯಲ್ಲಿ ಇನ್ನೂ ಏಳು ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯರು ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಪಘಾತದ ಸ್ಥಳಕ್ಕೆ ಪೊಲೀಸರು ಆಗಮಿಸಿ ಮೃತ ದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅತಿವೇಗವೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

ಬಂಡ್ಲಗುಡ ಪಾಲಿಕೆ ವ್ಯಾಪ್ತಿಯ ಹೈದರ್ ಶಾಕೋರ್ಟ್ ಸನ್‌ಸಿಟಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ನಿತ್ಯ ಬೆಳಗ್ಗೆ ನೂರಾರು ಜನರು ಈ ಭಾಗದಲ್ಲಿ ಸಂಚರಿಸುತ್ತಾರೆ. ಈ ಕ್ರಮದಲ್ಲಿ ಮಂಗಳವಾರ ಬೆಳಗ್ಗೆ ಅಪರಿಚಿತ ಕಾರೊಂದು ನಿಯಂತ್ರಣ ತಪ್ಪಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರಿಗೆ ಡಿಕ್ಕಿ ಹೊಡೆದಿದೆ. ಕಾರು ಯಾರದ್ದು, ಎಲ್ಲಿಂದ ಬಂತು, ಕಾರು ಚಲಾಯಿಸಿದವರು ಮದ್ಯದ ಅಮಲಿನಲ್ಲಿದ್ದರೇ ಎಂಬ ದೃಷ್ಟಿಯಿಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!