Saturday, September 20, 2025

ಚಿತ್ರದುರ್ಗದಲ್ಲಿ ಆಕಸ್ಮಿಕವಾಗಿ ಹೊತ್ತಿ ಉರಿದ ಕಾರು: ಯುವಕ ಸಜೀವ ದಹನ

ಹೊಸದಿಗಂತ ಡಿಜಿಟಲ್ ಡೆಸ್ಕ್:


ಚಿತ್ರದುರ್ಗದಲ್ಲಿ ಕಾರೊಂದು ಆಸ್ಮಿಕವಾಗಿ ಹೊತ್ತಿ ಉರಿದು, ಅದರೊಳಗಿದ್ದ ಯುವಕ ಸಜೀವವಾಗಿ ದಹನಗೊಂಡಿದ್ದಾನೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಅರಳೀಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದೆ. ಮೃತರನ್ನು ಸಿದ್ದೇಶ್ವರ್ (35) ಎಂದು ಗುರುತಿಸಲಾಗಿದೆ.

ಟಾಟಾ ನೆಕ್ಸಾನ್ ಕಾರು ಹೊತ್ತಿ ಉರಿದಿದೆ. ಅದರೊಳಗೆ ಸಿಲುಕಿ ಸಿದ್ದೇಶ್ವರ್ ಸಜೀವವಾಗಿ ಬೆಂಕಿಗೆ ತುತ್ತಾಗಿದ್ದಾರೆ.

ಸಿದ್ದೇಶ್ವರ್ ಟಾಟಾ ನೆಕ್ಸಾನ್ ಕಾರಿನಲ್ಲಿ ಹಿರಿಯೂರಿನಿಂದ ಅರಳೀಕಟ್ಟೆಗೆ ಮರಳುತ್ತಿದ್ದರು. ಈ ವೇಳೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕಾರು ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ. ಐಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ