ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಪ್ರದೇಶದ ಜೌನ್‌ಪುರದಲ್ಲಿ ರಸ್ತೆ ಬದಿ ಟೀ ಅಂಗಡಿಯಲ್ಲಿ ನಿಂತಿದ್ದವರ ಮೇಲೆ ಏಕಾಏಕಿ ವೇಗವಾಗಿ ಬಂದು ಕಾರು ಹರಿದಿದ್ದು, ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳೀಯರು ದೊಡ್ಡ ಕಲ್ಲುಗಳನ್ನು ಕಾರ್ ಮೇಲೆ ಎತ್ತಿ ಹಾಕಿ ಕಾರನ್ನು ಜಖಂಗೊಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Angry locals in #UttarPradesh‘s #Jaunpur attack a car after it allegedly mowed down people standing near a tea shop early this morning. Three succumbed to their injuries while several others are under medical observation. pic.twitter.com/oIiHu6WlMY
— Hate Detector 🔍 (@HateDetectors) November 29, 2023